ಸ್ಟ್ರೋಂಬೋಸಿಯ ಸೇಲಾನಿಕ Gard. - ಓಲಕೇಸಿ

Vernacular names : Malayalam: Kalavarai; Kalkadamba; Kalmanikkam

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ನವರೆವಿಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆಹಸಿರು ಮಿಶ್ರಿತ ಬೂದು ಬಣ್ಣ ಹೊಂದಿದ್ದು ಬೋಗುಣಿಯಾಕಾರದ ಕುಳಿ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕಿರುಕೊಂಬೆಗಳು ಹಸಿರಾಗಿದ್ದು ತೆಳುವಾಗಿರುತ್ತವೆ ಮತ್ತು ಜೋತಾಡುವ ರೀತಿಯಲ್ಲಿದ್ದು ದುಂಡಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.8 -2.2 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ, ಸಾಮಾನ್ಯವಾಗಿ ಮೇಲಿನ ಅರ್ಧ ಬಾಗ ದಪ್ಪವಾಗಿರುತ್ತದೆ,ತೊಟ್ಟುಗಳು ರೊಮರಹಿತವಾಗಿರುತ್ತವೆ;ಪತ್ರಗಳು 8-18 ´ 4-6.5 ಸೆಂ.ಮೀ.ಗಾತ್ರ ಹೊಂದಿದ್ದು,ಸಾಮಾನ್ಯವಾಗಿ ಅಂಡದ ಆಕೃತಿಯಿಂದ ಚತುರಸ್ರ-ಅಂಡದ ಹೊಂದಿದ್ದು ಸ್ವಲ್ಪಮಟ್ಟಿಗೆ ಕ್ರಮೇಣ ಚೂಪಾಗುವುದರಿಂದ ಚೂಪಾದ ಅಥವಾ ಚೂಪಲ್ಲದ ಮಾದರಿವರೆಗಿನ ತುದಿ,ದುಂಡಾದ ಅಥವಾ ಕೊಂಚ ಒಳಬಾಗಿದ ಮಾದರಿಯ ಬುಡ,ನಯವಾದ ಅಂಚು,ಉಪ-ತೊಗಲನ್ನೊಲುವ ಮೇಲ್ಮೈ ಹೊಂದಿದ್ದು ಪತ್ರಗಳ ತಳಭಾಗ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 6, ಆರೋಹಣ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು,ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು ಅಥವಾ ಸಣ್ಣ ಗುಬುಟುಗಳ ಮೇಲೆ ಗುಛ್ಛಗಳ ಮಾದರಿಯವುಗಳಾಗಿರುತ್ತವೆ;ಹೂಗಳು ಉಪ-ತೊಟ್ಟನ್ನು ಹೊಂದಿದ್ದು ಹಸಿರು ಮಿಶ್ರಿತ ಬಿಳಿ ಬಣ್ಣದವು.
ಕಾಯಿ / ಬೀಜ : ಡ್ರೂಪ್ಗಳು ಎಳೆಯದಾಗಿದ್ದಾಗ ಗದೆಯ ಆಕಾರದಲ್ಲಿದ್ದು ನಂತರ ಗೋಳಾಕಾರದಲ್ಲಿರುತ್ತವೆ, ಕಳೆತಾಗ ದಟ್ಟ ಕಡುನೀಲಿ ಬಣ್ಣ ಹೊಂದಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

700 ಮೀ. ಎತ್ತರದವರೆಗಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಮರಗಳೂ ಕಂಡುಬರುತ್ತವೆ.

ವ್ಯಾಪನೆ :

ಇಂಡೋಮಲೇಸಿಯ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Calcutta J. Nat. Hist. 6: 350. 1846; Gamble, Fl. Madras 1: 191.1997 (re.ed); Sasidharan, Biodiversity documentation for Kerala- Flowering Plants, part 6: 93. 2004; Saldanha, Fl. Karnataka 1: 187. 1996.

Top of the Page