English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಅಂದಾಜು 10 ಮೀ. ಎತ್ತರದವರೆಗಿನ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ನಯವಾಗಿದ್ದು,ಬೂದು ಬಣ್ಣದ ಛಾಯೆ ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 –-2 ಸೆಂ.ಮೀ. ಉದ್ದವಿದ್ದು, ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 4– 17(-21) X 2 – 7(-9) ಸೆಂ.ಮೀ. ಗಾತ್ರ, ಅಂಡವೃತ್ತದಿಂದ, ಅಂಡವೃತ್ತ-ಅಂಡದವರೆಗಿನ ಆಕಾರ , ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದುದರಿಂದ ಬೆಣೆಯಾಕಾರದವರೆಗಿನ ಮಾದರಿಯ ಬುಡ ಹೊಂದಿದ್ದು ,ಅಂಚು ದುಂಡೇಣು-ಗರಗಸ ದಂತಿತವಾಗಿರುತ್ತದೆ ಕೆಲವು ವೇಳೆ ಹಿಂಸುರುಳಿಯಾಗಿರುತ್ತದೆ,ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ, ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 6 – 9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಸರಳ ಅಥವಾ ಕವಲೊಡೆದ ಕದಿರು ಮಂಜರಿ ಮಾದರಿಯವು.;ಹೂಗಳು ತೊಟ್ಟುರಹಿತವಾಗಿದ್ದು, ಬಿಳಿಬಣ್ಣ ಹೊಂದಿರುತ್ತವೆ;ಕೇಸರಗಳು ಹಲವಾರು. |
| ಕಾಯಿ / ಬೀಜ : | ಡ್ರೂಪ್ಗಳು ಕಳಸದ ಆಕಾರದಲ್ಲಿದ್ದು, ಉಬ್ಬು ತಗ್ಗುಳ್ಳ ಗೆರೆಗಳನ್ನು ಸಮೇತವಿದ್ದು,0.7 ಸೆಂ.ಮೀ.ವರೆಗಿನ ಅಡ್ಡಗಲತೆಯನ್ನು ಹೊಂದಿರುತ್ತವೆ. |