ಸಿಂಪ್ಲೊಕಾಸ್ ರೋಸಿಯ Bedd. - ಸಿಂಪ್ಲೊಕೇಸಿ

ಪರ್ಯಾಯ ನಾಮ : ಸಿಂಪ್ಲೊಕಾಸ್ ಮ್ಯಾಕ್ರೋಫಿಲ್ಲ Wall. ex DC. ssp. ರೋಸಿಯ (Bedd.) Noot.

Vernacular names : Tamil: ಮಲನ್ ಕುರುವಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 7 ಮೀ. ಎತ್ತರದವರೆಗಿನ ಸಣ್ಣಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತದಿಂದ ಉಪದುಂಡಾಗಿರುವ ಆಕಾರ ಹೊಂದಿರುತ್ತವೆ,ಒರಟು ರೋಮದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.3 – 1.2 ಸೆಂ.ಮೀ. ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು, ಎಳೆಯದಾಗಿದ್ದಾಗ ಒರಟು ರೋಮಗಳಿಂದ ಕೂಡಿರುತ್ತವೆ; ಪತ್ರಗಳು7– 20 X 3 .5 – 6 ಸೆಂ.ಮೀ. ಗಾತ್ರ, ಅಂಡವೃತ್ತದಿಂದ,ಸಂಕುಚಿತ ಅಂಡವೃತ್ತ-ಬುಗುರಿ ಭರ್ಜಿಯವರೆಗಿನ ಆಕಾರ , ಬಾಲರೂಪಿ - ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದುದರಿಂದ ಬೆಣೆಯಾಕಾರದವರೆಗಿನ ಮಾದರಿಯ ಬುಡ, ಗರಗಸ ದಂತಿತ ಅಥವಾ ಸೂಕ್ಷ್ಮ ಗರಗಸ ದಂತಿತವಾದ ಅಂಚು, ಪತ್ರಗಳ ಮೇಲ್ಮೈ ಕಾಗದವನ್ನೋಲುವ ಮಾದರಿಯಿಂದ ಉಪತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ, ಒಣಗಿದಾಗ ಹಸಿರು ಛಾಯೆಯನ್ನು ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 5 – 10 ಇದ್ದು ,ತೀರಾ ಕೆಳಗಿನ ಜೋಡಿಗಳು ನೇರವಾಗಿ ಮತ್ತು ಚೂಪಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಮಧ್ಯಾಭಿಸರ ಮಾದರಿಯವುಗಳಾಗಿದ್ದು 4 ಸೆಂ.ಮೀ ವರೆಗಿನ ಉದ್ದ ಹೊಂದಿರುತ್ತವೆ;ಹೂಗಳು ನಸುಗೆಂಪು;ತೊಟ್ಟುಗಳು 0.2 ಸೆಂ.ಮೀ.ವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಸಂಕುಚಿತವಾದ ಅಂಡದಾಕೃತಿಯಲ್ಲಿದ್ದು, 1.2 – 2 X 0.5 ಸೆಂ.ಮೀ.ವರೆಗಿನ ಗಾತ್ರದಲ್ಲಿದ್ದು,ಕಳಿತಾಗ ಕೆಂಪು ಬಣ್ಣ ಹೊಂದಿರುತ್ತವೆ;ಬೀಜಗಳು ತೋಡು ಗುರುತುಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ನಡುವಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ (ವಯನಾಡಿನಿಂದ ಚಿಕ್ಕಮಗಳೂರಿನ ಪ್ರದೇಶಗಳು)ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Beddome, Trans. Linn. Soc. 25 (1866) 219; Gamble, Fl. Madras 2: 784. 1993 (re.ed.); Sasidharan, Biodiversity documentation for Kerala- Flowering Plants, part 6: 273. 2004; Nootboom, Rev. Symplocac. 229. 1975.

Top of the Page