ಸೈಝೀಸಿಯಂ ಕ್ಯಾರ್ಯೋಫಿಲ್ಲೇಟಂ (L.) Alston - ಮಿರ್ಟೇಸಿ

ಪರ್ಯಾಯ ನಾಮ : ಮಿರ್ಟಸ್ ಕ್ಯಾರ್ಯೋಫಿಲ್ಲೇಟಂ L.; ಸೈಝೀಸಿಯಂ ಕ್ಯಾರ್ಯೋಫಿಲ್ಲೇಯಿಯಂ sensu Gamble, non Gaertn.

Vernacular names : Tamil: ಚೆರುಜಾರ,ಕನಿ,ಕರಿಂಜರ,ಎಂಜರ,ಪೊಟ್ಟಿಂಜವಲ್,ಶೆಂಜೆರೆಲ್Malayalam: ಕುಂಟ ನೇರಳೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಉಪದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.3 ಸೆಂ.ಮೀ. ವರೆಗಿನ ಉದ್ದಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು 5 – 10 X 1.5 – 4 ಸೆಂ.ಮೀ.ವರೆಗಿನ ಗಾತ್ರವಿದ್ದು ಬುಗುರಿ ಆಕಾರ ಹೊಂದಿದ್ದು, ಚೂಪಲ್ಲದ ತುದಿ, ಒಳಬಾಗಿದ ಮಾದರಿಯಿಂದ ಹಿಡಿದು ಚೂಪಾಗಿರುವ ಮಾದರಿವರೆಗಿನ ಬುಡ,ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳನ್ನು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ಒಣಗಿದಾಗ ಕಂದು ಬಣ್ಣ ಹೊಂದಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಅಂಚಿನ ನಾಳಗಳು ಇರುತ್ತವೆ; ಎರಡನೇ ದರ್ಜೆಯ ನಾಳಗಳು ಅನೇಕವಿದ್ದು ಸಮಾಂತರದಲ್ಲಿರುತ್ತವೆ ಮತ್ತು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಎಲೆಯ ಅಕ್ಷದ ಕಡೆಗೆ ಕವಲುಗೊಂಡಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿನ, ಮಧ್ಯಾರಂಭಿ ನೀಳ ಛತ್ರ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಕಪ್ಪು ಬಣ್ಣದಲ್ಲಿದ್ದು ಗೋಳಾಕಾರ ಹೊಂದಿದ್ದು ಮುಕುಟದಲ್ಲಿ ಪುಷ್ಪಪಾತ್ರೆಯ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಬೀಜ ಒಂದು

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ನ ಮರಗಳಾಗಿ ಅಥವಾ ತೆರೆದ 700 ಎತ್ತರದವರೆಗಿನ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಫ್ರದೇಶಗಳಲ್ಲಿ ಈ ಸಸ್ಯ ವ್ಯಾಪಿಸಿದೆ.

ಗ್ರಂಥ ಸೂಚಿ :

Ic.t. 273.1868-74;Gamble, Fl. Madras 1:480.1997(rep.ed.); Sasidharan, Biodiversity documentation for Kerala- Flowering Plants, part 6:174.2004.

Top of the Page