ಸೈಝೀಸಿಯಂ ಹೇನಿಯಾಮ್ (Duthie) Wall. ex Gamble - ಮಿರ್ಟೇಸಿ

ಪರ್ಯಾಯ ನಾಮ : ಯೂಜೀನಿಯ ಹೇನಿಯಾನ Duthie;ಯೂಜೀನಿಯ ಸ್ಯಾಲಿಸಿಫೋಲಿಯ Wt.

Vernacular names : Tamil: ವಳ್ಳಮಂಚಿMalayalam: ಸಿಂಪಿ ನೇರಳೆ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಒರಟಾಗಿರುತ್ತದೆ ಮತ್ತು ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ಅನಿಯತವಾದ ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4- ಕೋನಯುಕ್ತವಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 1 ಸೆಂ.ಮೀ.ವರೆಗಿನ ಉದ್ದಹೊಂದಿದ್ದು ಹಾಗೂ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು ಹಾಗೂ 10 X 2.5 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಚತುರಸ್ರ,ಚತುರಸ್ರ-ಭರ್ಜಿಯ ಆಕಾರ,ಚೂಪಲ್ಲದ ಅಥವಾ ಮೊಂಡಾದ ಅಗ್ರವುಳ್ಳ ಚೂಪಾದ ತುದಿ,ಒಳಬಾಗಿದ ಬುಡ,ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಹೊಳಪುಳ್ಳ ಮೇಲ್ಭಾಗ, ರೋಮರಹಿತವಾದ ತಳ ಭಾಗವನ್ನು ಹೊಂದಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕೊಂಚವಾಗಿ ಕಾಲುವೆಗೆರೆ ಸಮೇತವಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ;ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾನಾತರದಲ್ಲಿದ್ದು ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಮಧ್ಯಾರಂಭಿ ಮಾದರಿಯಲ್ಲಿ, ಸಾಮಾನ್ಯವಾಗಿ ಪಾರ್ಶ್ವದಲ್ಲಿದ್ದು ಉದುರಿದ ಎಲೆಗಳ ಕುರುಹುಗಳಲ್ಲಿರುತ್ತವೆ,ಅಪರೂಪವಾಗಿ ಅಕ್ಷಾಕಂಕುಳಿನಲ್ಲಿರುತ್ತವೆ,ಹೂಗಳು ಬಿಳಿಯಾಗಿದ್ದು ತೊಟ್ಟುರಹಿತವಾಗಿ ಅಥವಾ ಕಿರುತೊಟ್ಟುಗಳ ಸಮೇತವಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಚತುರಸ್ರ-ಅಂಡವೃತ್ತವಾಗಿದ್ದು ಅಂದಾಜು 1 ಸೆಂ.ಮೀ. ಉದ್ದ ಹೊಂದಿದ್ದು ಮುಕುಟದಲ್ಲಿ ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

ನದಿ ದಡಗಳಲ್ಲಿ ಆಗಾಗ್ಗೆ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ.; ಪಶ್ಚಿಮ ಘಟ್ಟದ ಎಲ್ಲಾ ಫ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Gamble, F. Madras, 482(341). 1919;Gamble, Fl. Madras 1:482.1997(rep.ed.); Sasidharan, Biodiversity documentation for Kerala- Flowering Plants, part 6:177.2004;Cooke, Fl. Bombay 1: 493. 1902.

Top of the Page