ಸೈಝೀಸಿಯಂ ಮುನ್ರೋನಿಯೈ (Wt.) Chandrab. - ಮಿರ್ಟೇಸಿ

ಪರ್ಯಾಯ ನಾಮ : ಜಂಬೋಸ ಮುನ್ರೋನಿಯೈ Walp.; ಯೂಜೀನಿಯ ಮುನ್ರೋನಿಯೈ Wt.

Vernacular names : Tamil: ನ್ಜರ,ನ್ಜರಲ್,ನ್ಯರಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ಸಂಕುಚಿತವಾದ ರೆಕ್ಕೆ ಸಮೇತವಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.4-0.8 ಸೆಂ.ಮೀ. ಉದ್ದಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು 15–28 X3.5-6.5 ಸೆಂ.ಮೀ.ವರೆಗಿನ ಗಾತ್ರವಿದ್ದು ಭರ್ಜಿಯ ಆಕಾರ,ಚೂಪಾದುದರಿಂದ ಹಿಡಿದು ಕ್ರಮೇಣ ಉದ್ದವಾಗುತ್ತಾ ಮತ್ತು ಚೂಪಾಗುತ್ತಾ ಹೋಗುವ ತುದಿ, ಹೃದಯಾಕಾರದ ಅಥವಾ ಉಪ-ಹೃದಯಾಕಾರದ ಬುಡ,ನಯವಾದ ಅಂಚು, ತೊಗಲನ್ನೋಲುವುದರಿಂದ ಹಿಡಿದು ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಕಾಲುವೆಗೆರೆಯ ಸಮೇತವಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ;ಎರಡನೇ ದರ್ಜೆಯ ನಾಳಗಳು 16-22 ಜೋಡಿಗಳಿದ್ದು ,ತಳಭಾಗದಲ್ಲಿ ಹೆಚ್ಚು ದೃಢವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಮಧ್ಯಾರಂಭಿ ಮಾದರಿಯವು;ಹೂಗಳು ದೊಡ್ಡ ಗಾತ್ರದಲ್ಲಿದ್ದು ನಸುಗೆಂಪು ಅಥವಾ ಬಿಳಿ ಬಣ್ಣದವುಗಳಾಗಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು,ಹಸಿರು ಮಿಶ್ರಿತ ನಸುಗೆಂಪು ಬಣ್ಣದಲ್ಲಿದ್ದು 3.8 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ ಮತ್ತು ಮುಕುಟದಲ್ಲಿ ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

800 ಮತ್ತು1400 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ಪಾಲಕ್ಕಾಡು ಮತ್ತು ಕೊಡಗಿನ ನಡುವಿನ ಪ್ರದೇಶದಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Biol. Mem. 2: 58.1977;Gamble,Fl. Madras 1:473.1997 (rep.ed.); Sasidharan, Biodiversity documentation for Kerala- Flowering Plants, part 6:178.2004.

Top of the Page