ಟೂನ ಸೀಲಿಯೇಟ Roem. - ಮೀಲಿಯೇಸಿ

ಪರ್ಯಾಯ ನಾಮ : ಸಿಡ್ರೆಲ ಟೂನ Roxb. ex Rottl.& Willd.

Vernacular names : Tamil: ಚೀರಲುಮ್; ಚಿನ್ನ ಅಕಿಲ್; ತೇವತಲಿ; ವಂಡಕಮಿನ್Malayalam: ಸಂತನ ಬೀಜ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 28 ಮೀ. ಎತ್ತರದವರೆಗೆ ಬೆಳೆಯುವ ಎಲೆಯುದುರುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಬಲಿತಾಗ ದೊಡ್ಡ ಗಾತ್ರದ ಚಕ್ಕೆಗಳಾಗಿ ಸುಲಿಯುತ್ತವೆ;ಕಚ್ಚು ಮಾಡಿದ ಜಾಗ ಬಿಳಿಯ ಗೆರೆಗಳ ಸಮೇತವಾಗಿದ್ದು ಕಡು ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ರೋಮರಹಿತವಾಗಿರುತ್ತದೆ,
ಎಲೆಗಳು : ಎಲೆಗಳು ಸಂಯುಕ್ತ, ಸಮ ಸಂಖ್ಯೆಯ ಗರಿಗಳನ್ನು ಹೊಂದಿರುತ್ತವೆ 23 ರಿಂದ 90 ಸೆಂ.ಮೀ ವರೆಗಿನ ಉದ್ದವನ್ನು ಹೊಂದಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ನಡುಕಾಂಡ 60 ಸೆಂ.ಮೀ.ಅಥವಾ ಇನ್ನೂ ಹೆಚ್ಚಿನ ಉದ್ದವಿದ್ದು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತದೆ;; ಕಿರು ತೊಟ್ಟುಗಳು 0.7- 2.0 ಸೆಂ.ಮೀ. ಉದ್ದವಿರುತ್ತವೆ; ಕಿರುಪತ್ರಗಳು 6 – 15 ಜೋಡಿಗಳು ಇದ್ದು ಪರ್ಯಾಯ, ಉಪ-ಅಭಿಮುಖ ಅಥವಾ ಅಭಿಮುಖ ರೀತಿಯಲ್ಲಿ ಜೋಡಣೆಯಾಗಿರುತ್ತವೆ ಮತ್ತು 5-15 X2-6 ಸೆಂ. ಮೀ.ವರೆಗಿನ ಗಾತ್ರ, ಈಟಿಯಿಂದ ಹಿಡಿದು ಸಂಕುಚಿತ ಅಂಡದ ಆಕಾರ, ತುಸುವಾಗಿ ಬಾಗಿದ ಬಾಲರೂಪಿ ಕ್ರಮೇಣ ಚೂಪಾಗುವ ತುದಿ, ಅಸಮ್ಮಿತಿಯಾದ ಬುಡ, ನಯವಾದ ಕೆಲವು ವೇಳೆ ಎಳೆಯದಾಗಿದ್ದಾಗ ದುಂಡೇಣಿನ ಹಲ್ಲುಳ್ಳ ಅಂಚು,ಕಾಗದವನ್ನೋಲುವುದರಿಂದ ಹಿಡಿದು ಉಪ-ಚರ್ಮದವರೆಗಿನ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ,ಪತ್ರದ ಮೇಲ್ಭಾಗ ಹೊಳಪಿನಿಂದ ಕೂಡಿದ್ದು ತಳಭಾಗ ಮಸುಕಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 12 – 16 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿದ್ದು ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿದ್ದು ಜೋತಾಡುತಿರುತ್ತವೆ; ಹೂಗಳು ಬಿಳಿ ಬಣ್ಣದವು.
ಕಾಯಿ / ಬೀಜ : ಸಂಪುಟ ಫಲ ಅಂಡವೃತ್ತದ ಆಕಾರದಲ್ಲಿದ್ದು 5- ಕವಾಟಗಳು ಮತ್ತು ಬಿಳಿ ಮಚ್ಚೆಗಳ ಸಮೇತವಿದ್ದು 2 ಸೆಂ.ಮೀ. ಉದ್ದವಿರುತ್ತದೆ;ಬೀಜಗಳು ಹಲವಾರು,ಕಾಗದ ಮಾದರಿಯ ರೆಕ್ಕೆಯನ್ನು ಹೊಂದಿರುತ್ತದೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ತೆರೆದ ನಿತ್ಯ ಹರಿದ್ವರ್ಣ,ಅರೆನಿತ್ಯ ಹರಿದ್ವರ್ಣದಿಂದ ಹಿಡಿದು ಉದುರೆಲೆ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಉದ್ದಗಲಕ್ಕೂ ಈ ವ್ಯಾಪಿಸಿದೆ.

ಗ್ರಂಥ ಸೂಚಿ :

Syn. Hesper.139. 1846;Gamble, Fl. Madras 186.1997(rep.ed.) ; Sasidharan, Biodiversity documentation for Kerala- Flowering Plants, part 6:91.2004.

Top of the Page