ಟ್ರೈಖಿಲಿಯ ಕೊನ್ನಾರಾಯ್ಡಿಸ್ (W.& A.) Bentv. - ಮೀಲಿಯೇಸಿ

Synonym : ಜಾಂತೋಜೈಲಮ್ ಕೊನ್ನಾರಾಯ್ಡಿಸ್ Wt. & Arn. ಮತ್ತು ಹೇನಿಯ ಟ್ರೈಜುಗ Roxb.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 1 ಮೀ. ಎತ್ರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.;ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಟೊಳ್ಳಗಿರುತ್ತವೆ ಮತ್ತು ಕೋನಗಳನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಬೆಸ ಸಂಖ್ಯೆಯ ಗರಿರೂಪದಲ್ಲಿರುತ್ತವೆ ಮತ್ತು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು 35 ಸೆಂ.ಮೀ ಉದ್ದವಿರುತ್ತದೆ; ಅಕ್ಷದಿಂಡು 7-13 ಸೆಂ.ಮೀ.. ಉದ್ದವಿದ್ದು ತಳಭಾಗದಲ್ಲಿ ಉಬ್ಬಿಕೊಂಡಿರುತ್ತದೆ. ಮತ್ತು ಕಿರುಎಲೆಗಳನ್ನು ಸಂಧಿಸುವಲ್ಲಿ ಊದಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ; ಕಿರುಎಲೆಗಳು ಅಭಿಮುಖವಾಗಿರುತ್ತವೆ;ಕಿರುಎಲೆಗಳು 4 ರಿಂದ 5 ಜೋಡಿಗಳಿದ್ದು (ಕೆಲವು ವೇಳೆಯಲ್ಲಿ 6 ಜೋಡಿಗಳಿರುತ್ತವೆ)ಮತ್ತು ತುದಿಯಲ್ಲಿ ಒಂದು ಒಂಟಿಯಾಗಿರುತ್ತದೆ; ಕಿರುತೊಟ್ಟುಗಳು 0.4-1.5 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ; ಪತ್ರಗಳು 4.5 -15 X 2-7.5 ಸೆಂ.ಮೀ. ಗಾತ್ರದಲ್ಲಿದ್ದು ಭರ್ಜಿಯ ಆಕಾರದಿಂದ ಸಂಕುಚಿತ-ಅಂಡದವರೆಗಿನ ಆಕಾರ ಹೊಂದಿರುತ್ತವೆ; ತುದಿಗಳು ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು ಬುಡ ಅಸಮ ಪಾರ್ಶ್ವ ಹೊಂದಿರುತ್ತವೆ; ಅಂಚು ನಯವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯದಾಗಿದ್ದು ತಳಭಾಗದಲ್ಲಿ ಮಾಸಿದ ಬೂದು ಹಸಿರು ಬಣ್ಣದಲ್ಲಿರುತ್ತದೆ; ರೋಮರಹಿತವಾಗಿರುತ್ತದೆ;ಮಧ್ಯನಾಳ ಚಪ್ಪಟೆಯಾಗಿರುತ್ತದೆ ಅಥವಾ ಮೇಲ್ಭಾಗದಲ್ಲಿ ತುಸು ಮೇಲೆದ್ದಿರುತ್ತದೆ ; ಎರಡನೇ ದರ್ಜೆಯ ನಾಳಗಳು7-12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವುಗಳಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಉದ್ದನೆಯ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣದವು.
ಕಾಯಿ /ಬೀಜ : ಸಂಪುಟ ಫಲಗಳು 1.9 ಸೆಂ.ಮೀ. ಉದ್ದವಿದ್ದು ಗೋಳ ಅಥವಾ ಚತುರಸ್ರದ ಆಕಾರ -ದಲ್ಲಿದ್ದು ಚೂಪಾಗಿರುತ್ತವೆ ಮತ್ತು ಮಾಗಿದಾಗ ಕಿತ್ತಳೆ-ಕೆಂಪು ಹೊಂದಿರುತ್ತವೆ;ಬೀಜ 1.

ಜೀವಪರಿಸ್ಥಿತಿ :

2000 ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತು ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಅಂಚು ಹಾಗೂ ತೆರೆದ ಭಾಗಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶ -ಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Acta Bot. Neerl.11:13.1962;;Gamble, Fl. Madras 1:183.1997 (rep.ed.)Sasidharan, Biodiversity documentation for Kerala Plants, part 6, 91.2004 Saldanha, Fl. Karnataka 2:237.1996.

Top of the Page