ಟರ್ಪೀನಿಯ ಕೊಚಿನ್ ಚೈನೆನ್ಸಿಸ್ (Lour.) Merr. - ಸ್ಟಫೈಲಿಯೇಸಿ

ಪರ್ಯಾಯ ನಾಮ : ಟ್ರೈಸೆರಾಸ್ ಕೊಚಿನ್ ಚೈನೆನ್ಸಿಸ್ Lour.;ಟರ್ಪೀನಿಯ ನೆಪಾಲೆನ್ಸಿಸ್ Wall. ex Arn.

Vernacular names : Tamil: ಅಟ್ಟುನೀರ್ಮುಲ್ಲ,ಪಂಬರವೆಟ್ಟಿ,ಪಂಬವೆಟ್ಟಿ,ಸಮ್ತ. Malayalam: ನೀಲೌಷಧಿ ಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದ ಛಾಯೆಯಲ್ಲಿದ್ದು ಬಲಿತಾಗ ಆಳವಿಲ್ಲದ ಸೀಳಿಕಾ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿರುವುದರಿಂದ ಉಪದುಂಡಾಗಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಅಸಮಗರಿ ರೂಪಿಗಳಾಗಿದ್ದು ಅಭಿಮುಖ,ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು, ತೊಟ್ಟುಗಳ ನಡುವೆ ಇದ್ದು, ಉದುರುವ ಹೋಗುವ ಮಾದರಿಯವುಗಳಾಗಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು,ದುಂಡಾಗಿರುತ್ತವೆ, ರೋಮರಹಿತವಾಗಿರುತ್ತದೆ; ಪಾರ್ಶ್ವದಲ್ಲಿನ ಉಪಪತ್ರಗಳ ತೊಟ್ಟು 0.5 ಸೆಂ.ಮೀ. ಉದ್ದವಿದ್ದು ಮತ್ತು ,ತುದಿಯಲ್ಲಿನ ಉಪತ್ರಗಳ ತೊಟ್ಟು,ಉಬ್ಬಿದ ಅಗ್ರವನ್ನು ಹೊಂದಿದ್ದು 2 ಸೆಂ.ಮೀ. ಉದ್ದವಿರುತ್ತವೆ,ಕಾಲುವೆರೆ ಸಮೇತವಿರುತ್ತವೆ, ರೋಮರಹಿತವಾಗಿರುತ್ತದೆ; ಉಪಪತ್ರಗಳು ಅಭಿಮುಖಿಗಳಾಗಿದ್ದು, 3 ಇದ್ದು, 7-13 X 3– 5 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ಅಂಡವೃತ್ತ- ಚತುರಸ್ರದಿಂದ ಅಂಡದ ರೀತಿಯವರೆಗಿನ ಆಕಾರ, ಕ್ರಮೇಣ ಚೂಪಾಗುವ ತುದಿ,ಚೂಪಾದ ಬುಡ,ಗರಗಸ ದಂತಿತ ಅಂಚು,ತೊಗಲನ್ನು ಹೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ತೆಳುವಾಗಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 4 - 8 ಜೋಡಿಗಳಿದ್ದು, ಕ್ರಮೇಣವಾಗಿ ಬಾಗಿರುತ್ತವೆ ಮತ್ತು ತುದಿಯ ಕಡೆಗೆ ಆರೋಹಣವಾಗುತ್ತಾ ಹೋಗುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಪುನಾರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು ;ಹೂಗಳು ಕೆನೆ ಬಣ್ಣ ಹೊಂದಿರುತ್ತವೆ; ತೊಟ್ಟುಗಳು ಅಂದಾಜು 0.1 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು,ಗೋಳಾಕಾರ ಹೊಂದಿದ್ದು,3 ಕೋಶಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ 3.

ಜೀವಪರಿಸ್ಥಿತಿ :

1400 ಮೀ. ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಉಪ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ (ನೀಲಗಿರಿ,ವಯನಾಡು ಮತ್ತು ಬಾಬಾಬುಡನ್ ಗಿರಿ ಬೆಟ್ಟಗಳು)ಈ ಪ್ರಭೇದ ಕಂಡುಬರುತ್ತದೆ

ಗ್ರಂಥ ಸೂಚಿ :

J. Arnold Arbor. 19: 43. 1938; Gamble, Fl. Madras 1: 241. 1997 (re. ed); Sasidharan, Biodiversity documentation for Kerala- Flowering Plants, part 6: 110. 2004.

Top of the Page