ಟರ್ಪೀನಿಯ ಮಲಬಾರಿಕ Gamble - ಸ್ಟಫೈಲಿಯೇಸಿ

:

Vernacular names : Tamil: ಅಲಂಕು ಮರಂ,ಕನಕ್ಕಪ್ಪಲಂ,ಮರಲಿMalayalam: ನೀಲ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದ ಛಾಯೆಯಲ್ಲಿದ್ದು ನಯವಾಗಿರುತ್ತದೆ, ಬಲಿತಾಗ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ-ಕಂದು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿರುವುದರಿಂದ ದುಂಡಾಗಿದ್ದು,ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಅಸಮಗರಿ ರೂಪಿಗಳಾಗಿರುತ್ತವೆ,17 ರಿಂದ 40 ಸೆಂ.ಮೀ ಉದ್ದವಿದ್ದು,ಅಭಿಮುಖ,ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇದ್ದು, ಉದುರಿ ಹೋಗುವ ಮಾದರಿಯವುಗಳಾಗಿದ್ದು ಉದುರಿದ ನಂತರ ಗುರುತುಗಳನ್ನು ಉಳಿಸುವಂತವು;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು,ದುಂಡಾಗಿರುತ್ತವೆ, ರೋಮರಹಿತವಾಗಿರುತ್ತದೆ; ಪಾರ್ಶ್ವದಲ್ಲಿನ ಉಪಪತ್ರಗಳ ತೊಟ್ಟು 0.3 ಸೆಂ.ಮೀ. ಉದ್ದವಿದ್ದು,ತುದಿಯಲ್ಲಿನ ಉಪಪತ್ರಗಳ ತೊಟ್ಟು,ಉಬ್ಬಿದ ಅಗ್ರವನ್ನು ಹೊಂದಿದ್ದು 1.3 ಸೆಂ.ಮೀ. ಉದ್ದವಿರುತ್ತವೆ,ಕಾಲುವೆಗೆರೆ ಸಮೇತವಿರುತ್ತವೆ, ರೋಮರಹಿತವಾಗಿರುತ್ತದೆ; ಉಪಪತ್ರಗಳುಅಭಿಮುಖಿಗಳಾಗಿದ್ದು, 3 ರಿಂದ 9 ಇದ್ದು, 7-16 X 3.5 – 8.5 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ವಿಶಾಲ ಚತುರಸ್ರದ ರೀತಿಯವರೆಗಿನ ಆಕಾರ, ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ದುಂಡಾದ ರೀತಿಯ ಬುಡ,ಗರಗಸ ದಂತಿತ ಅಂಚು,ತೊಗಲನ್ನು ಹೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ತೆಳುವಾಗಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 5 - 7 ಜೋಡಿಗಳಿದ್ದು,ತುದಿಯ ಕಡೆಗೆ ಕ್ರಮೇಣವಾಗಿ ಬಾಗಿರುತ್ತವೆ ಮತ್ತು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಪುನಾರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು ;ಹೂಗಳು ಹಳದಿ ಬಣ್ಣದ ಛಾಯೆ ಹೊಂದಿರುತ್ತವೆ; ತೊಟ್ಟುಗಳು ಅಂದಾಜು 0.2 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು,ದಾರುವಿನಂತಿದ್ದು,ಉಪಗೋಳಾಕಾರ ಹೊಂದಿದ್ದು, 2.5 ಸೆಂ.ಮೀ.ವರೆಗಿನ ಉದ್ದವಿರುತ್ತವೆ ಹಾಗೂ ಸುಕ್ಕು ಸುಕ್ಕಾದ ಮೇಲ್ಮೈ ಹೊಂದಿದ್ದು ಬಿಳಿ ಮಿಶ್ರಿತ ಕಂದು ಬಣ್ಣ ಹೊಂದಿರುತ್ತದೆ;ಬೀಜಗಳ ಸಂಖ್ಯೆ 3.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಆಗಾಗ್ಗೆ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಆಗೊಮ್ಮೆ ಈಗೊಮ್ಮೆ ಈ ಪ್ರಭೇದ ಕಂಡುಬರುತ್ತದೆ

ಗ್ರಂಥ ಸೂಚಿ :

Gamble, Bull. Misc. Inform. Kew 1917: 135. 1916; Gamble, Fl. Madras 1: 241. 1997 (re. ed); Sasidharan, Biodiversity documentation for Kerala- Flowering Plants, part 6: 110. 2004.

Top of the Page