ಟುರ್ರೇಯಿಯ ವಿಲ್ಲೋಸ Bennett - ಮೀಲಿಯೇಸಿ

:

Vernacular names : Tamil: ಅಕಿಲ್;ಅರನಮರಂ;ಅರೋಮ;ಚಂದನವೆಪ್ಪು;ಚುವನ್ನಾಕಿಲ್;ದೇವದಾರಂ;ಏಕನ;ಮಧಗೇರಿವೆಂಬು;ಪಟುಕರಣ;ತುನ್ನಮ್; ವೆಡಿ ವೇಂಬು;ವೇಂಬು.Malayalam: ಗಂಧಗರಿಗೆ; ಕೆಂಪುಗಂಧ ಗಿರಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಎಲೆಯುದುರುವ ಪೊದೆಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸ್ವರ್ಣ ಹಳದಿ ಬಣ್ಣದ ಉದ್ದನೆಯ ಮೃದು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ತೊಟ್ಟುಗಳು 0.5 - 1.0 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತದೆ; ಪತ್ರಗಳು 5-10 X 3-6 ಸೆಂ.ಮೀ.ವರೆಗಿನ ಗಾತ್ರ,ಅಂಡ ಅಥವಾ ಅಂಡವೃತ್ತದ ಅಂಡದ ಆಕಾರ, ಕ್ರಮೇಣ ಚೂಪಾಗುವ ತುದಿ, ಚೂಪಾದ ಅಥವಾ ಚೂಪಲ್ಲದ ಬುಡ,ನಯವಾದ ಅಂಚು,ತೀರಾ ತೆಳುವಾದ ಮೇಲ್ಮೈ ಉದುರು ರೋಮಗಳಿಂದ ಕೂಡಿದ ಮೇಲ್ಭಾಗ, ಉದ್ದನೆಯ ಮೃದು ರೋಮಗಳಿಂದ ಕೂಡಿದ ತಳಭಾಗ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6ರಿಂದ 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿದ್ದು ಒಂಟಿಯಾಗಿ ಅಥವಾ2-6 ಗುಚ್ಛಗಳಲ್ಲಿರುತ್ತವೆ ಹೂಗಳು ಬಿಳಿಯಿಂದ ಹಳದಿವರೆಗಿನ ಬಣ್ಣ ಹೊಂದಿರುತ್ತವೆ, ಅಂದಾಜು 4 ಸೆಂ.ಮೀ. ಉದ್ದವಿದ್ದು ಸುವಾಸನಾಯುಕ್ತವಾಗಿರುತ್ತವೆ; ಪುಷ್ಪಮಂಜರಿ ವೃಂತ 2.5 ಸೆಂ.ಮೀ. ಉದ್ದವಿರುತ್ತದೆ.
ಕಾಯಿ / ಬೀಜ : ಸಂಪುಟ ಫಲ ಉಪ -ಗೋಳಾಕಾರದಲ್ಲಿದ್ದು 4- ಕೋಣೆಗಳನ್ನೊಳಗೊಂಡಿದ್ದು 1 – 1.5 ಸೆಂ.ಮೀ.ಅಡ್ಡಗಲತೆ ಹೊಂದಿರುತ್ತದೆ; ಬೀಜಗಳು ಪ್ರತಿ ಕೋಣೆಯಲ್ಲಿ 1 ರಿಂದ 2 ಇರುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಆಗಾಗ ಈ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Fl. Jav.Rar. 1:182.1840;Gamble,Fl. Madras174.1997(rep.ed.);Sasidharan, Biodiversitydocumentation for Kerala- Flowering Plants, part 6:91.2004.

Top of the Page