ವೆಪ್ರಿಸ್ ಬೈಲಾಕ್ಯುಲಾರಿಸ್ (Wt. & Arn.) Engl. - ರೂಟೇಸಿ

ಪರ್ಯಾಯ ನಾಮ : ಟೊಡ್ಡಾಲಿಯ ಬೈಲಾಕ್ಯುಲಾರಿಸ್ Wt. & Arn.

Vernacular names : Tamil: ಕರಕಿಲ್,ಮೂತ್ತಸ್ಸರಿMalayalam: ಮಣಗಪ್ಪೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 16 ಮೀ ಎತ್ತರದವರೆಗಿನ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ದೊಡ್ಡ ಗಾತ್ರದ ಬೆಂಡು ರಂಧ್ರಗಳನ್ನು ಹೊಂದಿರುತ್ತವೆ;ಕಚ್ಚು ಮಾಡಿದ ಕಿತ್ತಳೆ ಬಣ್ಣದ ಚುಕ್ಕೆಗಳನ್ನುಳ್ಳ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯದಾಗಿದ್ದು ತ್ರಿಪರ್ಣಿಕೆಗಳನ್ನು ಹೊಂದಿರುತ್ತವೆ ಹಾಗೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ಅಡ್ಡಸೀಳಿದಾಗ ಕಾಲುವೆಗೆರೆ ಸಮೇತವಿರುತ್ತದೆ;ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ,ಉಬ್ಬಿದ ಬುಡ ಹೊಂದಿದ್ದು ರೊಮ ರಹಿತವಾಗಿರುತ್ತದೆ;ಉಪತೊಟ್ಟುಗಳು 0.3 ರಿಂದ 1.5 ಸೆಂ.ಮೀ. ಉದ್ದಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಉಪಪತ್ರಗಳು 7.6 -25.4 X 3.8 -10.2 ಸೆಂ.ಮೀ ಗಾತ್ರ, ಸಂಕುಚಿತ ಅಂಡವೃತ್ತದ ಆಕಾರ, ಮೊಂಡಾದ ಅಗ್ರವುಳ್ಳ ಉದ್ದನೆಯ ಕ್ರಮೇಣ ಚೂಪಾಗುವ ತುದಿ,ಸ್ವಲ್ಪ ಮಟ್ಟಿಗೆ ಒಳಬಾಗಿದ ಬುಡ,ನಯವಾದ ಅಂಚು, ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಹೆಚ್ಚೂ ಕಡಿಮೆ ಚಪ್ಪಟೆಯಾಗಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ;ಎರಡನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ನೇರವಾಗಿದ್ದು ಸಮಾನಾಂತರದಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಸಾಮಾನ್ಯವಾಗಿ ಎಲೆಗಳ ಅಕ್ಷದ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಏಕಲಿಂಗಿಗಳಾಗಿದ್ದು, ಗಂಡು ಮತ್ತುಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಹಾಗೂ ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿ ಮಾಂಸಲವಾಗಿದ್ದು,ಗೋಳಾಕಾರ ಹೊಂದಿದ್ದು 2 ಕೋಶಗಳ ಸಮೇತವಿರುತ್ತವೆ ಹಾಗೂ ರಸಗ್ರಂಥಿ ಚುಕ್ಕೆಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ ಪ್ರತಿ ಕೋಶದಲ್ಲಿ1 ರಿಂದ 2 ಇರುತ್ತವೆ.

ಜೀವಪರಿಸ್ಥಿತಿ :

100 ಮತ್ತು 1200 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಉಪಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ಅಪರೂಪ (Ahmedulla & Nair,1987)

ಗ್ರಂಥ ಸೂಚಿ :

Engl. & Prantl., Nat. Pflazenf. 3: 178. 1896; Gamble, Fl. Madras 1: 151. 1997 (re. ed); Sasidharan, Biodiversity documentation for Kerala- Flowering Plants, part 6: 83. 2004; Saldanha, Fl. Karnataka 2: 225. 1996; Cooke, Fl. Bombay 1: 180.1903.

Top of the Page