ವರ್ನೋನಿಯ ಟ್ರವಂಕೂರಿಕ J. Hk. - ಆಸ್ಟರೇಸಿ

Synonym : ವರ್ನೋನಿಯ ವಲ್ಕೆಮಿರಿಯೆಫೊಲಿಯ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಮಬೆಗಳು ದುಂಡಾಗಿದ್ದು, ಉದುರಿ ಹೋದ ೆಲೆಗಲ ಗುರುತುಗಳನ್ನು ಹೊಂದಿದ್ದು, ಸೂಕ್ಷ್ಮ ಮೃದು ತುಪ್ಪಳ ಸಹಿತವಾಗಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ತುದಿಯಲ್ಲಿ ಗುಂಪಾಗಿರುತ್ತವೆ; ಎಲೆತೊಟ್ಟು 0.6 ರಿಂದ 1.2ಸೆಂ.ಮೀ. ಉದ್ದವೊದ್ದು ಮೇಲ್ಭಾಗದಲ್ಲಿ ಚಪ್ಪಟೆಯಾಗಿದ್ದು ರೋಮರಹಿತವಾಗಿರುತ್ತವೆ; ಎಲೆಪತ್ರಗಳು 4-15 x 2.3-7.5ಸೆಂ.ಮೀ. ಗಾತ್ರ, ಬುಗುರಿಯ ಆಕಾರ, ಚೂಪಲ್ಲದ ಅಥವಾ ಗುಂಡಾದ ತುದಿ, ಬೆಣೆಯಾಕಾರದ ಬುಡ, ಅಲೆಯಾಕಾರದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 8 ಜೋಡಿಗಳಿರುತ್ತವೆ. ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳನ್ನೊಳಗೊಂಡ ಚೆಂಡುಮಂಜರಿ ತುದಿಯಲ್ಲಿನ ಕವಲೊಡೆದ ಪುಷ್ಪ ಮಂಜರಿಯಲ್ಲಿದ್ದು ಕೆನ್ನೀಲಿ ಬಣ್ಣವನ್ನು ಹೊಂದಿರುತ್ತವೆ.
ಕಾಯಿ /ಬೀಜ : ಲಿಖೀನುಗಳು ಹಳದಿ ಬಣ್ಣದ ರಸಗ್ರಂಥಿಗಳನ್ನೊಳಗೊಂಡ ಉಬ್ಬು ತಗ್ಗು ಗೆರೆಗಳ ಸಮೇತವಿರುತ್ತವೆ ; ಬೀಜ ಒಂದು.

ಜೀವಪರಿಸ್ಥಿತಿ :

1000 ದಿಂದ 1700 ಮೀ ಮಧ್ಯಮ ಎತ್ತರ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಬೇಧ ಕಂಡುಬರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತ. ಅಗಸ್ತ್ಯಮಲೈ ಮತ್ತು ದಕ್ಷಿಣ ಸಹ್ಯಾದ್ರಿಯ ವರುಶನಾಡು.

ಗ್ರಂಥ ಸೂಚಿ :

Trans. Linn. Soc. London 14: 218.1824; Gamble, Fl. Madras 2: 672.1997 (re.ed); Sasidharan, Biodiversity documentation for Kerala- Flowering Plants, part 6: 257. 2004; Keshava Murthy and Yoganarasimhan, Fl. Coorg (Kodagu) 256. 1990; Cook, Fl. Bombay

Top of the Page