ವಿಬುರ್ನಮ್ ಹೆಬಾನ್ತಮ್ Wt. & Arn. - ಕ್ಯಾಪ್ರಿಫೋಲಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಕಾಡಂಬು, ಕಪಾರಿ ಕಾಯಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ವರೆಗಿನ ಎತ್ತರಕ್ಕೆ ಬೆಳೆಯುವ ಸಣ್ಣ ಮರಗಳು.
ಎಲೆಗಳು : ಎಲೆಗಳು ಸರಳ, ಕತ್ತರಿಯಾಕಾರದ ಅಭಿಮುಖ ಜೋಡನಾ ಮಾದರಿಯಲ್ಲಿದ್ದು; ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು ಅಂದಾಜು 1.5 ಸೆ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತದೆ; ಪತ್ರ 4.5 – 7 x 2.4 – 4 ಸೆ.ಮೀ. ಗಾತ್ರ ಅಂಡವೃತ್ತದಿಂದ – ಅಂಡಾಕಾರದವರೆಗಿದ್ದು ಚೂಪಾದ ತುದಿ, ಚೂಪಾದುದರಿಂದ ಸ್ವಲ್ಪ ಮಟ್ಟಿಗೆ
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಸಂಯುಕ್ತ ಪೀಠಛತ್ರ ಮಾದರಿಯಲ್ಲಿದ್ದು, ನೀಳಛತ್ರ ರೂಪಿಗಳಾಗಿರುತ್ತವೆ.
ಕಾಯಿ /ಬೀಜ : ಡ್ರೂಪುಗಳು ಅಂಡಾಕಾರದಲ್ಲಿದ್ದು ಒಂದು ಬೀಜವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

ಅತಿ ಎತ್ತರದ (ಸಾಮಾನ್ಯವಾಗಿ 2000 ರಿಂದ 2400 ಮೀ.) ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ – ನೀಲಗಿರಿ ಮತ್ತು ಪಳನಿ ಬೆಟ್ಟಗಳು.

ಗ್ರಂಥ ಸೂಚಿ :

Wight and Arnott, Prodr. 388. 1834; Gamble, Fl. Madras 1:576. 1997 (re.ed).

Top of the Page