ವೆಂಡ್ಲ್ಯಾಂಡಿಯ ತಿರ್ಸಾಯ್ಡಿಯ (Schult.) Steud. - ರೂಬಿಯೇಸಿ

:

Vernacular names : Malayalam: ಕದಂಬಂ,ತೊವರೈಕನ್ನಡದ ಪ್ರಾದೇಶಿಕ ಹೆಸರು: ಪೆಂಕನರಕಂ;ವೆಲ್ಲತಲಚಡಿ;ಪುವು;ತೊವರ.English: ತೋರಣಿ;ತಿಂತುಲು.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಶಜು 7 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ಬಲಿತಾಗ ಸೀಳಿಕಾ ಮಾದರಿಯಲ್ಲಿರುತ್ತದೆ;ಕತ್ತರಿಸಿದ ಜಾಗ ಕೆಂಪು ಛಾಯೆ ಹೊಂದಿರುತ್ತದೆ..
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಹಾಗೂ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪ್ರತಿ ಸುತ್ತಿನಲ್ಲಿ ಮೂರು ಎಲೆಗಳುಳ್ಳ ಮಾದರಿಯಲ್ಲಿರುತ್ತವೆ, ಕೆಲವು ವೇಳೆ ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಕ್ರಮೇಣ ಚೂಪಾಗುವ ಅಗ್ರವುಳ್ಳ ತ್ರಿಕೋನಾಕಾರದಲ್ಲಿದ್ದು ಎಲೆತೊಟ್ಟುಗಳ ನಡುವೆ ಇರುತ್ತವೆ;ತೊಟ್ಟು 0.5 –0.8 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತದೆ, ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 5.5 -10 X 1.8 – 4 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ಅಂಡವೃತ್ತ- ಭರ್ಜಿಯವರೆಗಿನ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಒಳಬಾಗಿದ-ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು ಹೊಂದಿದ್ದು ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗ ಮೃದು ತುಪ್ಪಳದಿಂದ ಕೂಡಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ; ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಕದಿರಣಿಗೆ ಆಕಾರದ ಮಧ್ಯಾರಂಭಿ ಮಾದರಿಯವು;ಹೂಗಳು ಬಿಳಿ ಬಣ್ಣದವು.
ಕಾಯಿ / ಬೀಜ : ಸಂಪುಟ ಫಲಗಳು ಕೋಣೆಗಳ ಬೆನ್ನು ಭಾಗದ ಮೂಲಕ ಬಿರಿಯುವ ಮಾದರಿಯಲ್ಲಿದ್ದು ಗೋಳಾಕಾರ ಹೊಂದಿದ್ದು, 2 ಕೋಶಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ ಹಲವಾರು ಇದ್ದು ಸಣ್ಣ ಗಾತ್ರ ಹೊಂದಿರುತ್ತವೆ.

ಜೀವಪರಿಸ್ಥಿತಿ :

400 ಮತ್ತು 1200ಮೀ. ನಡುವಿನ ಎತ್ತರದ ಪ್ರದೇಶಗಳ ಹುಲ್ಲುಗಾವಲು ಅಥವಾ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Nomencl. Bot. (ed. 2) 2: 786. 1841; Gamble, Fl. Madras 2: 588. 1993 (re. ed); Sasidharan, Biodiversity documentation for Kerala- Flowering Plants, part 6: 237. 2004; Almeida, Fl. Maharashtra 3:61. 2001; Cooke, Fl. Bombay 1: 584.1903.

Top of the Page