ಝಾಂತೋಫಿಲ್ಲಮ್ ಆರ್ನಾಟ್ಟಿಯಾನಮ್ Wt. - ಝಾಂತೊಫಿಲ್ಲೇಸಿ

ಪರ್ಯಾಯ ನಾಮ : ಝಾಂತೋಫಿಲ್ಲಮ್ ಫ್ಲಾವೆಸೆನ್ಸ್ Roxb.

Vernacular names : Tamil: ಮದುಕ್ಕ,ಮಡಕ್ಕ,ಮೊಟ್ಟಲ್Malayalam: ಮದ್ದಿನ ಸೊಪ್ಪು,ಮರಳು ಮಾತಂಗಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 8 ಮೀ. ಎತ್ತರದ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಹಸಿರಾಗಿದ್ದು ದುಂಡಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ;ತೊಟ್ಟುಗಳು 0.4 – 0.7 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 5.5 – 15 X 2 – 5.5 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ-ಚತುರಸ್ರ ಅಥವಾ ಚತುರಸ್ರ-ಭರ್ಜಿಯವರೆಗಿನ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದ ಅಥವಾ ಸ್ವಲ್ಪ ಮಟ್ಟಿಗೆ ಒಳಬಾಗಿದಬುಡ, ನಯವಾದ ಅಥವಾ ಸ್ವಲ್ಪಮಟ್ಟಿಗೆ ತರಂಗಿತವಾದ ಅಂಚು,ಕಾಗದವನ್ನೋಲುವ ಅಥವಾ ಉಪ ತೊಗಲ್ಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೋಡಿಗಳಿದ್ದು,ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬರೇಖೆಗೆ ಸಮಕೋನದಲ್ಲಿದ್ದು,ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಹೂಗಳು ಬಿಳಿ – ಹಳದಿ ಛಾಯೆಯ ಬಣ್ಣದಲ್ಲಿರುತ್ತವೆ; ತೊಟ್ಟುಗಳು 0.5 ಸೆಂ.ಮೀ.ವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು 1 ಕೋಶವನ್ನೊಳಗೊಂಡಿರುತ್ತವೆ,ಗೋಳಾಕಾರದಲ್ಲಿದ್ದು, ಸುಕ್ಕು ಸುಕ್ಕಾದ ಮೇಲ್ಮೈ ಹೊಂದಿದ್ದು, ಕಡುಹಸಿರು ಬಣ್ಣದಲ್ಲಿರುತ್ತವೆ;ಬೀಜಗಳ ಸಂಖ್ಯೆ1.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣದವರೆಗಿನ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Wight, Illustr.1: 50.t. 23. 1840; Gamble, Fl. Madras 1: 59. 1997 (re. ed); Sasidharan, Biodiversity documentation for Kerala- Flowering Plants, part 6: 36. 2004.

Top of the Page