ಜಾಂತೋಜೈಲಂ ರೆಟ್ಸ (Roxb.) DC - ರೂಟೇಸಿ

ಪರ್ಯಾಯ ನಾಮ : ಫಗಾರ ರೆಟ್ಸ Roxb.; ಜಾಂತೋಜೈಲಂ ಬುದ್ರುಂಗ (Roxb.)DC.

Vernacular names : Tamil: ಕೊತ್ತು ಮುರಿಕ್ಕು,ಮುಲ್ಲಿಲಂ,ಮುಲ್ಲಿಅವುMalayalam: ಜುಮ್ಮಿನ ಮರ,ಕಾಡುಮೆಣಸು,ಅರೆಂಪಲಕನ್ನಡದ ಪ್ರಾದೇಶಿಕ ಹೆಸರು: ಇಂಡಿಯನ್ ಪ್ರಿಕ್ಲಿ ಆ್ಯಶ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗಿನ ಎಲೆಉದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ದೊಡ್ಡ ಗಾತ್ರದ ಬೆಂಡು ರೀತಿಯ ಶಂಕುವಿನ ಆಕಾರದ ಕಿರುಮುಳ್ಳುಗಳ ಸಮೇತವಿರುತ್ತವೆ;ತೊಗಟೆ ಕಂದು ಬಣ್ಣದಲ್ಲಿದ್ದು ಬೆಂಡಿನ ತರಹವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಕಾರ ಹೊಂದಿದ್ದುಬೆಂಡು ರಂಧ್ರಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ ಹಾಗೂ ಶಂಕು ರೂಪದ ಕಿರುಮುಳ್ಳುಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಹಾಗೂ ಅಸಮ ಗರಿ ರೂಪಿ ಮಾದರಿಯದಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆಹಾಗೂ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ ;ಅಕ್ಷದಿಂಡು ಕಾಲುವೆಗೆರೆ ಸಮೇತವಿರುತ್ತದೆ ಮತ್ತು ರೋಮರಹಿತ -ವಾಗಿರುತ್ತದೆ; ;ಉಪತೊಟ್ಟುಗಳು 0.3 ಸೆಂ.ಮೀ. ಉದ್ದಹೊಂದಿದ್ದು ಅಡ್ಡ ಸೀಳಿದಾಗ ಕಾಲುವೆಗೆರೆಯನ್ನೊಳಗೊಂಡಿರುತ್ತವೆ;ಉಪಪತ್ರಗಳು 15 ರಿಂದ 23 ಇದ್ದು ಅಭಿಮುಖಿ -ಗಳಾಗಿರುತ್ತವೆ, 6.5 -11 X 3.5 -4.5 ಸೆಂ.ಮೀ ಗಾತ್ರ, ಚತುರಸ್ರ, ಅಂಡವೃತ್ತ-ಚತುರಸ್ರದ ಆಕಾರ, ಬಾಲರೂಪಿ ಮಾದರಿಯಿಂದ ಕ್ರಮೇಣ ಚೂಪಾಗುವವರೆಗಿನ ರೀತಿಯ ತುದಿ (ಅಗ್ರ 3 ಸೆಂ.ಮೀ. ವರೆಗಿನ ಉದ್ದವಿರುತ್ತದೆ),ಅಸಮ್ಮಿತಿಯಾದ ಬುಡ ಹೊಂದಿರುತ್ತವೆ, ಮತ್ತು ಕುಳಿಗಳಲ್ಲಿ ರಸಗ್ರಂಥಿಗಳನ್ನೊಳಗೊಂಡ ಸೂಕ್ಷ್ಮ ದುಂಡೇಣು -ಗಳನ್ನುಳ್ಳ ಅಂಚು, ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ, ವಿರಳವಾದ ಮಚ್ಚೆ ರೂಪದ ರಸಗ್ರಂಥಿಗಳ ಸಮೇತವಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆ -ಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 12 ಜೋಡಿಗಳಿರುತ್ತವೆ; ಮೂರನೇ ದರ್ಜೆಯನಾಳಗಳ ಕವಲುಗಳು ಸಾಮಾನ್ಯವಾಗಿ ಎಲೆಗಳ ಅಕ್ಷದ ಕಡೆಗಿರುವ ಮಾದರಿಯಿಂದ ವಿಶಾಲ ಜಾಲ ಬಂಧ ನಾಳ ವಿನ್ಯಾಸದವರೆಗಿನ ರೀತಿಯಲ್ಲಿರುತ್ತವೆ
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು ಎಲ್ಲದಕ್ಕಿಂತ ಮೇಲಿನ ಎಲೆಯ ಅಕ್ಷಾಕಂಕುಳಿನಲ್ಲಿರುತ್ತವೆ; ಹೂಗಳುಸಂಕೀರ್ಣಲಿಂಗಿಗಳಾಗಿದ್ದು,ಹಸಿರುಮಿಶ್ರಿತಹಳದಿಬಣ್ಣದಲ್ಲಿರುತ್ತವೆ;ಗಂಡುಮತ್ತುಹೆಣ್ಣು ಹೂಗಳು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಸೋತ ಫಲಗಳು ಗೋಳಾಕಾರ ಹೊಂದಿದ್ದು ಅಗ್ರದಲ್ಲಿ ಸೂಕ್ಷ್ಮ ಮೊನಚು ಮುಳ್ಳಿನ ಸಮೇತವಿರುತ್ತವೆ;ಬೀಜಗಳ ಸಂಖ್ಯೆ 1 ಇದ್ದು ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

500 ಮತ್ತು 1500 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಉಪಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

DC, Prodr. 1: 728. 1824; Gamble, Fl. Madras 1: 150. 1997 (re. ed); Sasidharan, Biodiversity documentation for Kerala- Flowering Plants, part 6: 84. 2004; Cooke, Fl. Bombay 1: 178.1903; Saldanha, Fl. Karnataka 2: 226. 1996; Almeida, Fl. Maharashtra 1:213. 1996.

Top of the Page