ಅಗ್ಲೇಯಿಯ ಎಲೆಯಾಗ್ನಾಯ್ಡಿಯ (A. Juss.) Benth. - ಮೀಲಿಯೇಸಿ

Synonym : ನೆಮೆಡ್ರ ಎಲೆಯಾಗ್ನಾಯ್ಡಿಯ A.Juss.; ಅಗ್ಲೇಯಿಯ ರಾಕ್ಸಬರ್ಗಿಯಾನ Hiern.var. ಕೊರ್ತಾಲೆನ್ಸಿಸ್ Gamble; ಅಗ್ಲೇಯಿಯ ಎಲೆಯಾಗ್ನಾಯ್ಡಿಯ (Benth.) var. ಕೊರ್ತಾಲೆನ್ಸಿಸ್ (Gamble)Nair;ಅಗ್ಲೇಯಿಯ ಎಲೆಯಾಗ್ನಾಯ್ಡಿಯ (A.Juss.)Benth.var. ಬೆಡ್ಡೋಮಿಯೈ (Gamble) Nair.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಪೊದೆಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ದಟ್ಟವಾದ ಸೂಕ್ಷ್ಮವಾದ ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುವುದಿಲ್ಲ.
ಎಲೆಗಳು : ಎಲೆಗಳು ಬೆಸ ಸಂಖ್ಯೆಯ ಸಂಯುಕ್ತಪರ್ಣಿಗಳಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು 1.5 - 3.5 ಸೆಂ.ಮೀ. ಉದ್ದವಿದ್ದು ಮೇಲ್ಭಾಗದಲ್ಲಿ ತುಸು ಕಾಲುವೆಗೆರೆಯನ್ನು ಹೊಂದಿರುತ್ತದೆ ಮತ್ತು ಹೊಟ್ಟು ರೂಪದ ಶಲ್ಕೆಗಳ ಸಮೇತವಿರುತ್ತದೆ;ಕಿರುಪತ್ರಗಳು 2 ರಿಂದ 3 ಜೋಡಿಗಳಿದ್ದು ಅಭಿಮುಖಿ ಅಥವಾ ಉಪ ಅಭಿಮುಖಿಗಳಾಗಿದ್ದು ತುದಿಯಲ್ಲಿ ಒಂದು ಕಿರುಪತ್ರದ ಸಮೇತವಿರುತ್ತದೆ, ಕಿರುಎಲೆಗಳು 3-7 X 1-3 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ- ಅಂಡವೃತ್ತದಿಂದ ಬುಗುರಿ-ಭರ್ಜಿವರೆಗಿನ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಚೂಪಾದ ಮಾದರಿಯಿಂದ ಉಪ-ಕ್ರಮೇಣವಾಗಿ ಚೂಪಾಗುವ ರೀತಿಯ ತುದಿ ಹೊಂದಿದ್ದು ಕೆಲವು ವೇಳೆ ಚೂಪಲ್ಲದ ಮಾದರಿಯ ತುದಿಯನ್ನು ಹೊಂದಿರುತ್ತವೆ;ಪತ್ರದ ಬುಡ ಚೂಪಾದ ರೀತಿಯಿಂದ ಬೆಣೆಯಾಕಾರದವರೆಗಿನ ಮಾದರಿಯಲ್ಲಿರುತ್ತದೆ; ಪತ್ರಗಳು ಕಾಗದವನ್ನೋಲುವ ಮಾದರಿಯಲ್ಲಿರುತ್ತವೆ;ಎಳೆಯದಾದ ಎಲೆಗಳು ದಟ್ಟವಾದ ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತದೆ ಮತ್ತು ಬಲಿತಾಗ ರೋಮರಹಿತವಾಗಿರುತ್ತವೆ; ಮಧ್ಯನಾಳ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8-13 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅತಿ ತೆಳುವಾಗಿದ್ದು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿದ್ದು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಎಲೆಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಹಾಗೂ ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಹೆಚ್ಚೂ ಕಡಿಮೆ ಗೋಳಾಕಾರದಲ್ಲಿದ್ದು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿದ್ದು 1.5 ಸೆಂ.ಮೀ. ಅಡ್ಡಗಳತೆಯನ್ನು ಹೊಂದಿದ್ದು ಹಾಗೂ ಅಗ್ರದಲ್ಲಿ ಅದುಮಿಕೊಂಡಿರುವುದಿಲ್ಲ;ಕೋಶಗಳು ಎರಡಿದ್ದು ಪ್ರತಿ ಕೋಶದಲ್ಲಿ 1 ಬೀಜ ಇರುತ್ತದೆ.

ಜೀವಪರಿಸ್ಥಿತಿ :

1000 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ಕಂಡುಬರುವ ಈ ಪ್ರಭೇದ ಸಾಮಾನ್ಯವಾಗಿ ಒಣ ನಿತ್ಯ ಹರಿದ್ವರ್ಣ ಕಾಡುಗಳಲ್ಲಿರುತ್ತವೆ ಕೆಲವು ವೇಳೆ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಮರಗಳಾಗಿಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಪೆಸಿಫಿಕ್ ದ್ವೀಪಗಳವರೆಗೆ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Fl. Austral. 1:38.1863;Panell,A taxonomic monograph of the genus Aglaia Lour.(Meliaceae),143.1992; Gamble, Fl. Madras 1:504.1997 (rep.ed.)Sasidharan, Biodiversity documentation for Kerala Plants,part6, 87.2004;Saldanha,Fl.Karnataka 2:230.1996.

Top of the Page