ಅಗ್ಲೇಯಿಯ ಲಾಯಿಯೈ (Wt.) Sald. - ಮೀಲಿಯೇಸಿ

Synonym : ನಿಮ್ಮೋನಿಯ ಲಾಯಿಯೈ (Wt.); ಅಗ್ಲೇಯಿಯ ಜೈನಿಯೈ Viswa. & Rama ಅಗ್ಲೇಯಿಯ ಕೆನರಾನ (Turcz.)Hiern.; ಅಗ್ಲೇಯಿಯ ತಮಿಳ್ನಾಡೆನ್ಸಿಸ್ Nair & Rajan

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳುಳ್ಳ 30 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಕಾರದಲ್ಲಿರುತ್ತವೆ ಮತ್ತು ಹಳದಿ ಕಂದು ಬಣ್ಣದ ಹೊಟ್ಟು ರೂಪದ ಶಲ್ಕೆಗಳಿಂದ ಆವರಿಸಿಕೊಂಡಿರುತ್ತದೆ.
ಜಿನುಗು ದ್ರವ : ಕತ್ತರಿಸಿದ ತೊಗಟೆಯ ತುದಿಯಿಂದ ಬಿಳಿ ಸಸ್ಯ ಕ್ಷೀರ ಒಸರುತ್ತದೆ;ಕ್ಷೀರ ವಿಫುಲವಾಗಿರುವುದಿಲ್ಲ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಬೆಸ ಸಂಖ್ಯೆಯ ಗರಿರೂಪದಲ್ಲಿರುತ್ತವೆ ಮತ್ತು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು 6 - 26 ಸೆಂ.ಮೀ.ಉದ್ದವಿದ್ದು ಉಬ್ಬಿದ ಬುಡ ಹೊಂದಿದ್ದು ಹಳದಿ ಕಂದು ಬಣ್ಣದ ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತವೆ ; ಕಿರುತೊಟ್ಟುಗಳು ಅಂದಾಜು 1ಸೆಂ.ಮೀ. ಉದ್ದವಿರುತ್ತವೆ; ಕಿರುಎಲೆಗಳು 5 ರಿಂದ 7 ಇದ್ದು ಅಭಿಮುಖ-ಉಪಅಭಿಮುಖ ಅಥವಾ ಪರ್ಯಾಯ ರೀತಿಯಲ್ಲಿರುತ್ತವೆ;ಪತ್ರಗಳು 12-18 X 5-6 ಸೆಂ.ಮೀ. ಗಾತ್ರದಲ್ಲಿದ್ದು ಚತುರಸ್ರದಿಂದ ಚತರಸ್ರ-ಭರ್ಜಿಯ ಆಕಾರದಲ್ಲಿದ್ದು ಚೂಪಾದ ತುದಿ,ಓರೆಯಾದ ಬುಡ ಹೊಂದಿರುತ್ತವೆ ಮತ್ತು ತರಂಗಿತವಾದ ಮತ್ತು ತುಸುವಾಗಿ ಹಿಂಸುರುಳಿಯಾದ ಅಂಚನ್ನು ಹೊಂದಿರುತ್ತವೆ ಹಾಗೂ ತಳಭಾಗದಲ್ಲಿ ವಿರಳವಾಗಿ ಹೊಟ್ಟು ರೂಪದ ಶಲ್ಕೆಗಳಿಂದ ಆವೃತಗೊಂಡಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿರುತ್ತವೆ ಕೆಲವು ವೇಳೆ ಅಕ್ಷಗಳಲ್ಲಿ ರೋಮಗಳನ್ನು ಹೊಂದಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ, ಕೆಲವು ವೇಳೆಯಲ್ಲಿ ಬಲಿತ ಎಲೆಗಳಲ್ಲಿ ಅಗೋಚರವಾಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಎಲೆಗಳಿಗಿಂತ ಚಿಕ್ಕದಾಗಿ ಅಥವಾ ಸಮನಾಗಿರುತ್ತವೆ;ಹೂಗಳು ಏಕ ಲಿಂಗಿಗಳು.
ಕಾಯಿ /ಬೀಜ : ಸಂಪುಟ ಫಲಗಳುಅಂದಾಜು 2.5 ಸೆಂ.ಮೀ. ಉದ್ದವಿದ್ದು ಉಪಗೋಳಾಕಾರ ಅಥವಾ ಬುಗುರಿಯಾಕಾರದಲ್ಲಿ ಅಥವಾ ಪೇರು ಹಣ್ಣಿನ ರೀತಿ ತುದಿಯ ಕಡೆಗೆ ಮೊನಚಾಗುತ್ತಾ ಹೋಗುವ ಆಕಾರದಲ್ಲಿರುತ್ತವೆ ಮತ್ತು ಅಸಮ ಪಾರ್ಶ್ವತೆಯುಳ್ಳದ್ದಾಗಿರುತ್ತವೆ; ಸಂಪುಟ ಫಲಗಳು 2 ರಿಂದ 3 ಕೋಶಗಳನ್ನೊಳಗೊಂಡಿದ್ದು ಅಂಟು ರಸವನ್ನು ಹೊಂದಿರುತ್ತವೆ; ಬೀಜಗಳು

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಮೇಲ್ಛಾವಣಿಮತ್ತು ಉಪಮೇಲ್ಛಾವಣಿ ಮರಗಳಾಗಿ ಕೆಳ ಮತ್ತು ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಪೆಸಿಫಿಕ್ ದ್ವೀಪಗಳವರೆಗೆ ವ್ಯಾಪಿಸಿರುವ ಈ ಸಸ್ಯ ಪಶ್ಚಿಮ ಘಟ್ಟದ ದಕ್ಷಿಣ, ಮಧ್ಯ ಮತ್ತು ಮಹಾರಾಷ್ಟ್ರದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಬೆಳೆಯುತ್ತದೆ.

ಗ್ರಂಥ ಸೂಚಿ :

Saldanha & Nicols., Fl.Hassan Dist. 392.1976;Panell, A taxonomic monograph of the genus Aglaia Lour.(Meliaceae),97.1992. Gamble, Fl. Madras 1:182.1997 (rep.ed.)Sasidharan, Biodiversity documentation for Kerala Plants, part 6, 88.2004 Saldanha, Fl. Karnataka 2:230.1996.