ಅಗ್ರೋಸ್ಟಿಸ್ಟ್ಯಾಕಿಸ್ ಬೋರ್ನಿಯಾನ್ಸಿಸ್ Becc. - ಯೂಫೊರ್ಬಿಯೇಸಿ

Synonym : ಅಗ್ರೋಸ್ಟಿಸ್ಟ್ಯಾಕಿಸ್ ಮೀಬೋಲ್ಡಿಯೈ Pax. & K. Hoffm.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು ಎಲೆ ಮತ್ತು ಕಾವಿನೆಲೆಗಳ ಉದುರಿದ ಗುರುತುಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ತುದಿಯಲ್ಲಿನ ಕುಡಿ ಮೊಗ್ಗುಗಳು ಹಳದಿ ಅಂಟು ದ್ರವವನ್ನು ಸ್ರವಿಸುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಅಂಡಾಕಾರದಲ್ಲಿದ್ದು ಉದುರಿ ಹೋಗುವಂತಹವು ;ತೊಟ್ಟುಗಳು1 - 2.5 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟಪೀನ ಮಧ್ಯದ ಆಕಾರದಲ್ಲಿರುತ್ತವೆ;ಪತ್ರಗಳು 12 – 26(-50) X 3 – 7. 5 ಸೆಂ ಮೀ. ವರೆಗಿನ ಗಾತ್ರ, ಬುಗುರಿ-ಭರ್ಜಿ ಮಾದರಿಯ ಆಕಾರ,ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದ ಮತ್ತು ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಸಮೇತವಿದ್ದು ಒಣಗಿದಾಗ ಕಂದು ಬಣ್ಣದಲ್ಲಿರುತ್ತವೆ ; ಮಧ್ಯನಾಳ ದೃಢವಾಗಿರುತ್ತದೆ ಹಾಗೂ ಪತ್ರದ ಎರಡೂ ಬದಿಯಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 18 ಜೋಡಿಗಳಿರುತ್ತವೆ ಹಾಗೂ ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿರುತ್ತವೆ ಹಾಗೂ ಹತ್ತಿರದ ಅಂತರ ಹೊಂದಿದ್ದು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಕದಿರು ಮಂಜರಿ ಮಾದರಿಯವು; ಹೂಗಳು ಏಕಲಿಂಗಿಗಳು;ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ತೊಟ್ಟುರಹಿತವಾಗಿದ್ದು 3 ರಿಂದ 5 ಹೂಗಳು ಒಟ್ಟಿಗೆ ಪತ್ರಕಗಳ ಒಳಗಿರುತ್ತವೆ;ಹೆಣ್ಣು ಹೂಗಳು ಪತ್ರಕಗಳ ಒಳಗೆ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 1 ಸೆಂ.ಮೀ ವ್ಯಾಸ ಹೊಂದಿದ್ದು 3 ಹಾಲೆಗಳನ್ನೊಳಗೊಂಡಿರುತ್ತವೆ; ಪ್ರತಿ ಕೋಶದಲ್ಲಿ 1 ಬೀಜ ಇರುತ್ತದೆ.

ಜೀವಪರಿಸ್ಥಿತಿ :

600 ರಿಂದ 1500 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟಗಳಲ್ಲಿನ ದಕ್ಷಿಣ ಸಹ್ಯಾದ್ರಿಯಲ್ಲಿ ಸಾಮಾನ್ಯವಾಗಿಯೂ ಹಾಗೂ ಮಧ್ಯ ಸಹ್ಯಾದ್ರಿಯಲ್ಲಿ ಅಪರೂಪವಾಗಿಯೂ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Nelle For.Borneo 331.1902;Gamble, Fl. Madras2:1318.1993(rep.ed.); Sasidharan, Biodiversity documentation for Kerala – Flowering plants, part 6, 408.2004;Saldanha, Fl. Karnataka 2:115.1996.

Top of the Page