ಸಯಾತೋಕೇಲಿಕ್ಸ್ ಜೇಲಾನಿಕಸ್ Thw. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರದವರೆವಿಗೆ ಬೆಳೆಯುವ ಮಧ್ಯಮ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ವಾಯುವಿನಿಮಯ ಬೆಂಡುರೂಪದ ರಂಧ್ರಗಳ ಸಹಿತವಾಗಿದ್ದು ಕೆನೆಬಣ್ಣದ ಕಚ್ಚುಗಳನ್ನೊಳಗೊಂಡಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮತ್ತು ಕಿರುಕೊಂಬೆಗಳು ಇಳೆಬೀಳುವ ರೀತಿಯವು
ಎಲೆಗಳು : ಎಲೆಗಳು ಸರಳ, ಪರ್ಯಾವಾಗಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತದೆ. ಎಲೆತೊಟ್ಟು ಕಾಲುವೆಗೆರೆ ಸಹಿತ, ಉಪ-ರೋಮರಹಿತವಾಗಿರುತ್ತವೆ. ಎಲೆ ಪತ್ರ 13-25 × 4-7.5 ಸೆಂ.ಮೀ. ದೀರ್ಘ ಚತುರಸ್ರಾಕಾರ ಭರ್ಜಿಯಾಕಾರದಲ್ಲಿದ್ದು, ಬಾಲರೂಪದ ತುದಿ, ಚೂಪಾದ ಬುಡಭಾಗ, ನಯವಾದ ಅಂಚು, ಉಪ-ಕಾಗದವನ್ನು ಹೋಲುವ ಮೇಲ್ಮೈ ಹೋಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಮೇಲಕ್ಕೆದ್ದಿರುತ್ತವೆ; ಎರಡನೇ ದರ್ಜೆಯ ನಾಳಗಳು 10 ರಿಂದ 30 ಜೋಡಿಗಳಿದ್ದು ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವುಗಳಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತೆಳುಹಸಿರು ಬಣ್ಣದ ಹೊಂದಿದ್ದು ಅಗ್ರಸ್ಥಾನದಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿರುವ 1 ರಿಂದ 3 ಒಟ್ಟಿಗೆ ಇರುವ ಗುಚ್ಛಕಾರ ಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗುಂಡಾಕಾರದಲ್ಲಿ ಅಥವಾ ದೀರ್ಘ ಚತುರಸ್ರಾಕಾರದಲ್ಲಿದ್ದು ಸುಮಾರು 7 ಸೆಂ.ಮೀ. ಉದ್ದವಿರುತ್ತದೆ. ಬೀಜಗಳು ಅದುಮಿದಂತಿದ್ದು 8 ರಿಂದ 10 ಇದ್ದು ಸಾಲಾಗಿ ಅಳವಡಿಸಲ್ಪಟ್ಟಿರುತ್ತವೆ.

ಜೀವಪರಿಸ್ಥಿತಿ :

ಉಪ-ಮೇಲ್ಛಾವಣಿ ಮರಗಳಾಗಿ ತೇವಾಂಶವುಳ್ಳ ಸಮುದ್ರಮಟ್ಟಕ್ಕಿಂತ 200ಮೀ ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಾಣಸಿಗುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟದ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿ ಹಾಗೂ ಶ್ರೀಲಂಕೆಯಲ್ಲೂ ಈ ಪ್ರಭೇಧದ ವ್ಯಾಪನೆ ವಿಸ್ತರಿಸಿದೆ.

ಗ್ರಂಥ ಸೂಚಿ :

Hooker and Thomson, Fl. Ind. 127. 1855; Gamble, Fl. Madras 1: 13.1997 (re.ed); Sasidharan, Biodiversity documentation for Kerala- Flowering Plants, part 6: 16. 2004; Saldanha, Fl. Karnataka 1: 41. 1996.

Top of the Page