ಆ್ಯಂಟಿಯಾರಿಸ್ ಟಾಕ್ಸಿಕಾರಿಯ Lesch. - ಮೊರೇಸಿ

:

Vernacular names : Tamil: ಅರಂತಲ್; ಮರವುರಿ;ಅರಂಜೆಲ್ಲಿ.Malayalam: ಅಜ್ಜನ ಪಟ್ಟೆ;ಜಾಗೂರಿ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 50 ಮೀ. ಎತ್ತರದವರೆಗಿನ ಆನಿಕೆಗಳನ್ನುಳ್ಳ ಎಲೆಯುದುರು ಮಾದರಿಯ ದೊಡ್ಡ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು-ಬಿಳಿ ಬಣ್ಣದಲ್ಲಿದ್ದು ನಯವಾಗಿರುತ್ತದೆ; ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳು ಗಂತಿಗಳ ರೂಪದದಲ್ಲಿದ್ದು ಲಂಬ ಸಾಲಿನಲ್ಲಿ ಜೋಡಿತವಾಗಿರುತ್ತವೆ; ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ದುಂಡಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ ನಂತರ ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಜಲರೂಪಿ ಅಥವಾ ಹಾಲಿನ ಬಣ್ಣದಲ್ಲಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಸಣ್ಣಗಾತ್ರದವುಗಳಾಗಿದ್ದು, ಆಜನ್ಮ ಸಂಯುಕ್ತ ವಾಗಿರುತ್ತವೆ ಮತ್ತು ಉದುರಿ ಹೋದಾಗ ಗುರುತನ್ನು ಉಳಿಸುತ್ತವೆ; ತೊಟ್ಟುಗಳು ಅಂದಾಜು 0.3 – 0.8 ಸೆಂ.ಮೀ. ಉದ್ದ ಹೊಂದಿದ್ದು ಮೃದುತುಪ್ಪಳವನ್ನು ಹೋದಿರುತ್ತವೆ;ಪತ್ರಗಳು 6.5 – 15 X 2.5 – 5 ಸೆಂ.ಮೀ. ಗಾತ್ರವಿದ್ದು ಅಂಡವೃತ್ತ- ಚತುರಸ್ರದ ಆಕಾರದಲ್ಲಿದ್ದು,ಚೂಪಲ್ಲದ ಕ್ರಮೇಣ ಚೂಪಾಗುವ ತುದಿ, ದುಂಡಾದ ಅಥವಾ ಹೃದಯಾಕಾರದ ಬುಡ, ನಯವಾದ ಅಥವಾ ಅಂತರಹೊಂದಿದ ಸೂಕ್ಷ್ಮದಂತಗಳಿಂದ ಕೂಡಿದ ಅಂಚು ಹೊಂದಿರುತ್ತವೆ,ಎಳೆಯದಾದ ಎಲೆಗಳು ಎರಡೂ ಬದಿಯಲ್ಲಿ ರೋಮಸಹಿತವಾಗಿದ್ದು ಬಲಿತಾಗ ರೋಮರಹಿತವಾಗಿದ್ದು ಒರಟು ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡ ಕೂಡುವಂತವು.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳು; ಗಂಡು ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿನ ಪುಷ್ಪ ಮಂಜರಿ ವೃಂತದಲ್ಲಿರುತ್ತವೆ;ಹೆಣ್ಣು ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ / ಬೀಜ : ಡ್ರೂಪ್ ಫಲಗಳು ಮಾಂಸಲವಾಗಿದ್ದು,ಪೇರು ಹಣ್ಣಿನ ರೂಪ ಅಥವಾ ಬುಗುರಿಯಾಕಾರದಲ್ಲಿರುತ್ತವೆ ಮತ್ತು ಕಡುಗೆಂಪು ಬಣ್ಣವನ್ನು ಹೊಂದಿರುತ್ತವೆ;ಬೀಜಳು ಒಂದು.

ಜೀವಪರಿಸ್ಥಿತಿ :

1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳ ಹೊರಹೊಮ್ಮುವ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪೂರ್ವಾರ್ಧ ಗೋಳದ ಸಂಕ್ರಾಂತಿ ಪ್ರದೇಶಗಳು;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Ann. Muss.Nal. Hist. Nat. paris 6;478.t.22.1820;Jard. Bot.Geneve 1898;Gamble, Fl. Madras 3:1367. 1998(rep.ed.);Sasidharan, Biodiversity documentation for Kerala- Flowering Plants, part 6:437.2004.

Top of the Page