ಅಪೊರೋಸ ಅಕ್ಯುಮಿನೇಟ Thw. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 5 ಮೀ.ವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ಉಪ- ದುಂಡಾಕಾರದಲ್ಲಿದ್ದು ಒಣಗಿದಾಗ ಹಳದಿ ಬಣ್ಣದಲ್ಲಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ. ಕಾವಿನೆಲೆಗಳು ಉದುರಿಹೋಗುವ ಮಾದರಿಯವು; ತೊಟ್ಟುಗಳು 0.6 -1 ಸೆಂ.ಮೀ. ಉದ್ದವಿದ್ದು ಕಾಲುವೆ ಗೆರೆಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 5 - 11 X 1.3 – 4 ಸೆಂ. ಮೀ. ಗಾತ್ರ, ಅಂಡವೃತ್ತ-ಸಂಕುಚಿತ ಚತುರಸ್ರ ಮಾದರಿಯ ಆಕಾರದಲ್ಲಿದ್ದು, ಬಾಲರೂಪಿ ತುದಿ , ಚೂಪಾದ ಅಥವಾ ಉಪ-ಒಳಬಾಗಿದ ಬುಡ,ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 5 - 8 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣದವುಗಳಾಗಿದ್ದು ಕಿರಿದಾದ ಕದಿರು ಮಂಜರಿಯಲ್ಲಿ ಇರುತ್ತವೆ ; ಹೆಣ್ಣು ಹೂಗಳು ತೊಟ್ಟುರಹಿತವಾದ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರ ಹೊಂದಿದ್ದು, ಕೆಂಪು ವರ್ಣದ ಬೀಜ ಕೋಶದ ಒಳಪೊರೆಯನ್ನೊಳಗೊಂಡಿರುತ್ತವೆ;ಬೀಜ 1.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ.

ಗ್ರಂಥ ಸೂಚಿ :

Thwaites, Enum.Pl. Zeyl. 288.1861; Gamble, Fl. Madras 2:1309.1993 (rep.ed.); Sasidharan,Biodiversity documentation for Kerala – Flowering plants, part 6, 409.2004.

Top of the Page