ಅಟುನ ಟ್ರವಂಕುರಿಕ (Bedd.) Kosterm. - ಕ್ರೈಸೊಬೆಲನೇಸಿ

Synonym : ಪ್ಯಾರಿನೇರಿಯಂ ಟ್ರವಂಕೋರಿಕಂ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ನಯವಾಗಿದ್ದು ಕಂದು ಮತ್ತು ಬಿಳಿ ಬಣ್ಣದ ಚುಕ್ಕೆಗಳಿಂದ ಕೂಡಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳದಿಂದ ಆವೃತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆ ಹೊಂದಿರುತ್ತವೆ; ಕಾವಿನೆಲೆಗಳು 1 ಸೆಂ.ಮೀ ಉದ್ದವಿದ್ದು, ರೇಖಾತ್ಮಕ ರೂಪದಲ್ಲಿದ್ದು,ಮೃದುತುಪ್ಪಳದಿಂದ ಕೂಡಿದ್ದು ಉದುರಿಹೋಗುವಂತಹುಗಳು;ಎಲೆ ತೊಟ್ಟುಗಳು 0.2 ರಿಂದ 0.4 ಸೆಂ.ಮೀ ಉದ್ದವಿರುತ್ತವೆ;ಎಲೆಪತ್ರಗಳು 7-12X2.5-3 ಸೆ.ಮೀ ಗಾತ್ರವಿದ್ದು, ಭರ್ಜಿಯಾಕಾರ ಹೊಂದಿದ್ದು,ಕ್ರಮೇಣ ಚೂಪಾಗುವ ತುದಿ, ಚೂಪಾದ ಅಥವಾ ಕೊಂಚ ಬೆಣೆಯಾಕಾರದ ಬುಡ ಹೊಂದಿದ್ದು ರೋಮರಹಿತವಾದ ಮೇಲ್ಮೈ ಹಾಗೂ ಪತ್ರದ ತಳಭಾಗದಲ್ಲಿ ರೇಶ್ಮೆಯಂತಹ ರೋಮಗಳುಳ್ಳ ಮಧ್ಯನಾಳವನ್ನು ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ, ಅಂದಾಜು 5 ಸೆಂ.ಮೀ ಉದ್ದವಿರುವ ರೇಷ್ಮೆಯಂತಹ ಉದ್ದವಾದ ಕೂದಲುಳ್ಳ ಮಧ್ಯಾಭಿಸರ ಮಂಜರಿಯಲ್ಲಿರುತ್ತವೆ;ಹೂಗಳು ನಸುಗೆಂಪು.
ಕಾಯಿ /ಬೀಜ : ಡ್ರೂಪ್ ಗಳು ಒಂದರಿಂದ ಎರಡು ಬೀಜಗಳನ್ನು ಒಳಗೊಂಡಿರುತ್ತವೆ

ಜೀವಪರಿಸ್ಥಿತಿ :

ಸ್ಥಳೀಯವಾಗಿ 600 ರಿಂದ 900 ಮೀ ಎತ್ತರದ ಪ್ರದೇಶಗಳ ತೇವದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ದಕ್ಷಿಣ ಸಹ್ಯಾದ್ರಿ

ಸ್ಥಿತಿ :

ಉಳಿವಿನಂಚಿನ ಆತಂಕಕಾರಿ ಸ್ಥಿತಿ(IUCN 2000)

ಗ್ರಂಥ ಸೂಚಿ :

Reinwardtia 7: 423. 1969; Gamble, Fl. Madras 1: 437. 1997 (re. ed); Sasidharan, Biodiversity documentation for Kerala- Flowering Plants, part 6: 167. 2004.

Top of the Page