ಭೆಸ ಇಂಡಿಕ (Bedd.) Ding Hou - ಸೆಲಾಸ್ಟ್ರೇಸಿ

Synonym : ಟ್ರೋಕಿಸ್ಯಾಂಡ್ರ ಇಂಡಿಕ Bedd.; ಕುರ್ರಿಮಿಯ ಬೈಪಾರ್ಟ್ಟೈಟ Lawson; ಕುರ್ರಿಮಿಯ ಇಂಡಿಕ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗೆ ಬೃಹತ್ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಬಣ್ಣ ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು ಮಿಶ್ರಿತ ಕೆನೆ ಬಣ್ಣದವು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು ದುಂಡಾಕಾರದಲ್ಲಿರುತ್ತವೆ. ಉದುರಿದ ಎಲೆಗಳ ಹಾಗೂ ಕಾವಿನೆಲೆಗಳ ಗುರುತುಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಕಾವಿನೆಲೆಗಳು ದೊಡ್ಡ ಗಾತ್ರದಲ್ಲಿದ್ದು 2.5 ಸೆಂ.ಮೀ ಉದ್ದ ಹೊಂದಿರುತ್ತವೆ ಹಾಗೂ ಭರ್ಜಿಯಾಕಾರದವುಗಳಾಗಿದ್ದು ಉದುರಿಹೋಗುವ ಸ್ವಭಾವದವು;ಎಲೆತೊಟ್ಟುಗಳ ಉದ್ದ2.5 ರಿಂದ 4.5 ಸೆಂ.ಮೀ ಇದ್ದು ಎರಡೂ ತುದಿಗಳಲ್ಲಿ ಬಾವುಗೊಂಡಿರುತ್ತವೆ;ಪತ್ರಗಳ ಗಾತ್ರ 10-18X 4.5-8.5 ಸೆಂ.ಮೀ ಅಂಡವೃತ್ತ-ಚತುರಸ್ರಾಕಾರದಿಂದ ಹಿಡಿದು ಸಂಕುಚಿತ ಅಂಡಾಕಾರದವರೆಗಿನ ಆಕಾರ ಹೊಂದಿದ್ದು, ಅಧಿಕಕೋನವುಳ್ಳ ಚೂಪುಳ್ಳ ಅಥವಾ ಮಡಚಿದ,ಚಿಕ್ಕದಾದ ಕ್ರಮೇಣ ಚೂಪಾಗುವ ಮಾದರಿಯ ತುದಿ ಹಾಗೂ ದುಂಡಾಕಾರದ ಬುಡವನ್ನು ಪತ್ರಗಳು ಹೊಂದಿರುತ್ತವೆ.ಪತ್ರಗಳು ಕಾಗದವ ನ್ನೋಲುವ ಮಾದರಿಯಲಿದ್ದು ರೋಮರಹಿತವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು ಧೃಢವಾದ 11 ರಿಂದ 20 ಜೋಡಿಗಳಿದ್ದು,ಬಹುಮಟ್ಟಿಗೆ ಸಮಾಂತರ ಹೊಂದಿದ್ದುಮಧ್ಯನಾಳಕ್ಕೆ ಓರೆಯಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು, ಸಮೀಪವಾಗಿ ಅಡ್ಡವಾಗಿ ನಿರ್ಮಾಣಗೊಂಡಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹ ಮಾದರಿಯವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ತುದಿಯಲ್ಲಿರುವ,ಕವಲೊಡೆದ ಮಧ್ಯಾಭಿಸರ ಮಾದರಿಯವು;ಹೂಗಳು ಗಾತ್ರದಲ್ಲಿ ಸಣ್ಣದಾಗಿದ್ದು,ಶ್ವೇತವರ್ಣ ಹೊಂದಿರುತ್ತವೆ
ಕಾಯಿ /ಬೀಜ : ಸಂಪುಟ ಫಲ ಕೆಂಪು ಬಣ್ಣ ಹೊಂದಿದ್ದು ಎರಡು ಹಾಲೆಗಳ ಸಮೇತವಿರುತ್ತದೆ; ಪ್ರತಿ ಹಾಲೆಯಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ಮಧ್ಯಮ ಮತ್ತು ಅತಿಹೆಚ್ಚು ಎತ್ತರದ ಪ್ರದೇಶಗಳಲ್ಲಿನ (900 ರಿಂದ 1600 ಮೀ) ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಚಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ.

ಗ್ರಂಥ ಸೂಚಿ :

Blumea suppl.. 4.152.1958;Gamble, Fl. Madras 1:207. 1997(re. ed.); Sasidharan, Biodiversity documentation for Kerala- Flowering Plants, part 6:95.2004.

Top of the Page