ಬ್ಲಾಕಿಯ ಕ್ಯಾಲಿಸಿನ Benth. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ- ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಕತ್ತರಿಸಿದಾಗ ಎಲೆಗಳು ಮತ್ತು ಕುಡಿಕೊಂಬೆಗಳ ತುದಿಯಿಂದ ಬೆಳ್ಳಗಿನ ಸಸ್ಯ ರಸ ಒಸರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಅಥವಾ ಉಪ-ಅಭಿಮುಖಿಗಳಾಗಿದ್ದುಕೆಲವು ವೇಳೆ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು 0.2 – 0.3 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ;ಪತ್ರಗಳು 4 - 9.5 X 1.6 –4.2 ಸೆಂ ಮೀ. ಗಾತ್ರ, ಅಂಡವೃತ್ತ-ವಜ್ರಾಕೃತಿಯ ಆಕಾರ, ತುದಿ ಚೂಪಾಗಿದ್ದು ಚೂಪಲ್ಲದ ಅಥವಾ ದುಂಡಾದ ತುದಿಯಲ್ಲಿ ಕಚ್ಚುಳ್ಳ ಅಗ್ರವನ್ನು ಹೊಂದಿರುತ್ತವೆ;ಬುಡ ಚೂಪಾಗಿರುತ್ತದೆ;ಅಂಚು ನಯವಾಗಿದ್ದು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿನಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿದ್ದು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ; ಗಂಡು ಹೂಗಳು ತುದಿಯಲ್ಲಿನ ತೆಳುವಾದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ ಅಥವಾ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಆಳವಿಲ್ಲದ ಹಾಲೆ ಸಮೇತವಿದ್ದು ಅಂದಾಜು 1 ಸೆಂ ಮೀ.ಉದ್ದವಿರುತ್ತವೆ ; ಕಾಯಿಗಳ ಪುಷ್ಪ ಪಾತ್ರೆಯ ದಳಗಳು ಹರಡಿಕೊಂಡಿರುತ್ತವೆ; ಬೀಜಗಳು 3.

ಜೀವಪರಿಸ್ಥಿತಿ :

700 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೆಯಿಂದ ವರುಶುನಾಡು ಬೆಟ್ಟಗಳಲ್ಲಿ ಮತ್ತು ಮಧ್ಯ ಸಹ್ಯಾದ್ರಿಯ ಸಹ್ಯಾದ್ರಿಯ ಕೊಡಗು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

J.Linn. Soc.Bot. 17:226.1880;Gamble, Fl. Madras 2:1338.1993 (rep.ed.); Sasidharan, Biodiversity documentation for Kerala – Flowering plants, part 6, 411.2004;Saldanha, 2; 120.1996.

Top of the Page