ಬೊಂಬ್ಯಾಕ್ಸ್ ಸೀಬ L. - ಬೊಂಬಕೇಸಿ

Synonym : ಬೊಂಬ್ಯಾಕ್ಸ್ ಮಲಬಾರಿಕಮ್ DC.

ಕನ್ನಡದ ಪ್ರಾದೇಶಿಕ ಹೆಸರು : ಬೂರುಗ, ಕೆಂಪುಬೂರುಗ, ಮರಹತ್ತಿ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 40ಮೀ ಎತ್ತರದವರೆಗೆ ಬೆಳೆಯುವ ಆನಿಕೆಗಳನ್ನೊಳಗೊಂಡ, ಎಲೆಯುದುರು ಮಾದರಿಯ ಬೃಹತ್ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು, ಉದುರಿಹೋಗುವ ಶಂಖುವಿನಾಕಾರದ ಮುಳ್ಳುಗಳ-ನ್ನೊಳಗೊಂಡು ಚಕ್ಕೆಯುಕ್ತವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಅಡ್ಡವಾಗಿದ್ದು, ಕಿರುಕೊಂಬೆಗಳು ದುಂಡಾಗಿದ್ದು ಮುಳ್ಳುಗಳ ಸಮೇತವಿದ್ದು, ಗಿಣ್ಣುಗಳ ಜಾಗದಲ್ಲಿ ಸುತ್ತುಮಾದರಿಯಲ್ಲಿ ಗುಂಪಾಗಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಹಸ್ತರೂಪಿ ಸಂಯುಕ್ತ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿದ್ದು ಉದುರಿಹೋಗುವ, ಭರ್ಜಿಯಾಕಾರದ ಕಾವಿನೆಲೆಗಳನ್ನೊಳಗೊಂಡಿರುತ್ತವೆ. ತೊಟ್ಟು 12ರಿಂದ 3ಸೆಂ.ಮೀ. ಉದ್ದವಿದ್ದು, ದುಂಡಾಗಿದ್ದು ರೋಮರಹಿತಗೊಂಡಿರುತ್ತವೆ; ಕಿರುಎಲೆಗಳು 3 ರಿಂದ 8, ಪತ್ರಗಳು (4-)8-16 x (1.5-)3-7ಸೆಂ.ಮೀ. ಗಾತ್ರವಿದ್ದು ಇಕ್ಕಟ್ಟಾದ ಅಂಡವೃತ್ತಾಕೃತಿಯಿಂದ ಬುಗುರಿ-ಈಟಿ ಸಮ್ಮಿಶ್ರಾಕಾರದವರೆಗಿನ ಆಕಾರ ಹೊಂದಿದ್ದು, ಬಾಲರೂಪಿಯಿಂದ ಹಿಡಿದು ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದಿಂದ ಹಿಡಿದು ಚೂಪಾಗುವ ಬುಡ, ನಯವಾದ ಅಂಚು, ಕಾಗದವನ್ನೋಲುವ ಹಾಗೂ ರೋಮರಹಿತ-ವಾದ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಸುಮಾರು 14 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳಸ್ವರೂಪದವು.
ಪುಷ್ಪಮಂಜರಿ/ಹೂಗಳು : ಹೂಗಳು ಸಾಮಾನ್ಯವಾಗಿ ಎಲೆಯಿಲ್ಲದ ಕವಲುಗಳ ಮೇಲೆ ಒಂಟಯಾಗಿ ಅಥವಾ ಗುಚ್ಛಾಕಾರ-ದಲ್ಲಿರುತ್ತವೆ ಹಾಗೂ ಕಡುಕೆಂಪು ಬಣ್ಣವನ್ನು ಹೊಂದಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ದಾರುಯುಕ್ತವಾಗಿದ್ದು, 5-ಕೋಶಗಳನ್ನೊಳಗೊಂಡಿದ್ದು ಒಳಾವರಣ ದಟ್ಟವಾದ ಉಣ್ಣೆಯಿಂದ ಕೂಡಿರುತ್ತದೆ; ಬೀಜಗಳು ಹಲವಾರು

ಜೀವಪರಿಸ್ಥಿತಿ :

ಹೊರಹೊಮ್ಮಿ ಕಾಣುವ ಈ ಸಸ್ಯ1400 ಮೀ. ಎತ್ತರದ ಪ್ರದೇಶಗಳಲ್ಲಿನ ಆರಂಭಿಕ ಸ್ಥಳಗಳಲ್ಲಿ ಕಂಡುಬರುತ್ತವೆ.

ಗ್ರಂಥ ಸೂಚಿ :

Linnaeus, Sp. Pl. 511.1753; Gamble, Fl. Madras 1: 99.1997 (re.ed.); Sasidharan, Biodiversity documentation for Kerala- Flowering Plants, part 6: 55. 2004; Saldanha, Fl. Karnataka 1:239. 1996; Keshava Murthy and Yoganarasimhan, Fl. Coorg (Kodagu) 73. 1990;

Top of the Page