ಸಯಾತಿಯ ನೀಲ್ಗಿರೆನ್ಸಿಸ್ Holttum - ಸಯಾತಿಯೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿರುತ್ತದೆ ಮತ್ತು ಉದುರಿದ ಎಲೆಗಳ ಗುರುತುಗಳಿಂದ ಆವೃತವಾಗಿರುತ್ತದೆ
ಎಲೆಗಳು : ಪರ್ಣಾಂಗಳ ಮುಕುಟ ಕಾಂಡದ ಅಗ್ರದಲ್ಲಿರುತ್ತವೆ;ಪರ್ಣಾಂಗಗಳು ದ್ವಿಗರಿ ರೂಪದವುಗಳಾಗಿದ್ದು 200 ಸೆಂ.ಮೀ. ಉದ್ದವಿರುತ್ತವೆ;ಆಧಾರ ಕಾಂಡ ಅಂದಾಜು 100 ಸೆಂ.ಮೀ. ಉದ್ದವಿರುತ್ತವೆ ಹಾಗೂ ದಪ್ಪವಾದ ಬುಡ ಹೊಂದಿದ್ದು,ಎಲ್ಲಾ ಕಡೆ ಕಂದು ಬಣ್ಣದ ರೋಮಗಳಿಂದ ಆವರಿಸಿರುತ್ತದೆ;ಗರಿಗಳು ಅಂದಾಜು 12 ಜೋಡಿಗಳಿದ್ದು ಪರ್ಯಾಯವಾಗಿ ಜೋಡಿತಗೊಂಡಿದ್ದು ಪ್ರಮುಖವಾದ ತೊಟ್ಟಿನ ಸಮೇತವಿರುತ್ತವೆ; ಪಿಚ್ಚಕಗಳು 7.5-12X1.5-2.5 ಸೆಂ.ಮೀ. ಗಾತ್ರವಿದ್ದು, ಗರಿರೂಪಿಗಳಾಗಿರುತ್ತವೆ, ಹಾಲೆಗಳು ಪರ್ಯಾಯ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು ಚತುರಸ್ರಾಕಾರದಲ್ಲಿದ್ದು,0-7-1.5X0.2-0.4 ಸೆಂ.ಮೀ. ಗಾತ್ರವಿದ್ದು,ದುಂಡೇಣಿನ ಅಂಚನ್ನು ಹೊಂದಿದ್ದು,ತೆಳು ಪದರದ ರೂಪವನ್ನು ಹೊಂದಿರುತ್ತವೆ;ನಾಳಗಳು ಕವಲುಗೊಂಡಿರುತ್ತವೆ.
ಕಾಯಿ / ಬೀಜ : ಬೀಜಾಣುಗಳನ್ನು ಉತ್ಪತ್ತಿ ಮಾಡುವ ಬೀಜಕದಾನಿಗಳು ದುಂಡಾಗಿದ್ದು ನಾಳಗಳ ಕವಲುಗಳ ಮೇಲೆ ಆಸೀನವಾಗಿರುತ್ತವೆ.

ಜೀವಪರಿಸ್ಥಿತಿ :

1000 ಮತ್ತು 2200 ಮೀ. ಎತ್ತರದ ಪ್ರದೇಶಗಳಲ್ಲಿನ ಹೊಳೆಗಳ ಅಂಚಿನಲ್ಲಿಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಸ್ಥಿತಿ :

ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಏಕೈಕ ಅನಾವೃತ ಬೀಜಕಾರಿ ಮರಗಳು

ಗ್ರಂಥ ಸೂಚಿ :

Kew Bull. 19.468. 1965;Manickam and Irudayaraj, Pteridophyte flora of Western ghats- south India. 160.1992.

Top of the Page