ಸೈನೋಮೆಟ್ರ ಬೆಡ್ಡೋಮಿಯೈ Prain. - ಸಿಸಾಲ್ಪಿನಿಯೇಸಿ

Synonym : ಸೈನೋಮೆಟ್ರ ಬೊರ್ಡಿಲೋನಿ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಎಲೆಗಳು : ಎಲೆಗಳು ಸಮಸಂಖ್ಯಾ ಗರಿ ರೂಪಿ ಸಂಯುಕ್ತ ಮಾದರಿಯವು; ಕಾವಿನೆಲೆಗಳು ಉದುರಿಹೋಗುವ ರೀತಿಯವು; ಕಿರು ಎಲೆಗಳು 3 ಜೋಡಿಯಿದ್ದು, ತಳ ಭಾಗದ ಕಿರು ಎಲೆ ಜೋಡಿ ಚಿಕ್ಕಗಾತ್ರದಲ್ಲಿರುತ್ತವೆ, ಪತ್ರಗಳು 2.5 - 3.5 x 1 - 1.5 ಸೆ.ಮೀ. ಗಾತ್ರ ಹಾಗೂ ಅಂಡವೃತ್ತ - ಬುಗುರಿ ಆಕಾರದಲ್ಲಿದ್ದು ಅಸಮ ಬದಿಗಳನ್ನು ಹೊಂದಿರುತ್ತವೆ, ತು
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಗೋಳಾಕಾರದಲ್ಲಿದ್ದು ನೆಟ್ಟನೆಯ ತೋಡು ಗುರುತನ್ನು ಹೊಂದಿದ್ದು 1.3 ಸೆ.ಮೀ. ಉದ್ದವಾಗಿರುತ್ತದೆ. ಹಾಗೂ ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

500 ರಿಂದ 800 ಮೀ. ಎತ್ತರ ಪ್ರದೇಶಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಕಾಡುಗಳ ನೀರಿನ ಝರಿಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ; ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯ ಮಲೆಯ ಪಶ್ಚಿಮ ಭಾಗದಲ್ಲಿ ಅಲ್ಲಲ್ಲಿ ಹಾಗೂ ಮಧ್ಯ ಸಹ್ಯಾದ್ರಿಯ ವೈನಾಡು ಮತ್ತು ಕೊಡಗು ಪ್ರದೇಶಗಳಲ್ಲಿ ಅಪರೂಪವಾಗಿಯೂ ಈ ಪ್ರಭೇದ ಕಂಡು ಬರುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ.(IUCN 2000)

ಗ್ರಂಥ ಸೂಚಿ :

J. Asiat. Soc. Bengal 65: 478. 1897; Gamble, Fl. Madras 1: 413 & 414. 1997 (re. ed); Sasidharan, Biodiversity documentation for Kerala- Flowering Plants, part 6: 154. 2004; Saldanha, Fl. Karnataka 1: 389. 1996.

Top of the Page