ಡೈಕಾಪೆಟಾಲಮ್ ಜೆಲೋನಿಯಾಯ್ಡಿಸ್ (Roxb.) Engler - ಡೈಕಾಪೆಟಲೇಸಿ

Synonym : ಮೋಕುರ್ರ ಜೆಲೋನಿಯಾಯ್ಡಿಸ್

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಲೆಯುವ ದೊಡ್ಡ ಪೊದೆಗಳು ಅಥವಾ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು,ಆಕಾರದಲ್ಲಿ ದುಂಡಾಗಿರುತ್ತವೆ ಹಾಗೂ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ತೆಯಲ್ಲಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ-ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರದಲ್ಲಿದ್ದು 0.5ಸೆಂ.ಮೀವರೆಗಿನ ಉದ್ದ ಹೊಂದಿರುತ್ತವೆ; ಎಲೆತೊಟ್ಟುಗಳು 0.1 ರಿಂದ 0.4 ಸೆಂ.ಮೀ ಉದ್ದವಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 5-11.5 X 2-4ಸೆಂ.ಮೀ ಗಾತ್ರ,ಅಂಡವೃತ್ತದ ಆಕಾರದಲ್ಲಿದ್ದು, ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿರುವ ಮೊಂಡಾದ, ಕ್ರಮೇಣ ಚೂಪಾಗುವ ತುದಿ ಮತ್ತು ಚೂಪಾದ ಬುಡವನ್ನು ಹೊಂದಿರುತ್ತವೆ; ಪತ್ರದ ಅಂಚು ನಯವಾಗಿರುತ್ತದೆ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ; ಮಧ್ಯನಾಳ ಮತ್ತು ಪತ್ರದ ತಳಭಾಗದ ನಾಳಗಳು ವಿರಳವಾದ ಮೃದುತುಪ್ಪಳದಿಂದ ಕೂಡಿರುತ್ತವೆ, ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 5-6 ಜೋಡಿಗಳಿದ್ದು, ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ಲಂಬರೇಖೆಗೆ ಸಮಕೋನದಲ್ಲಿದ್ದು, ಜಾಲಬಂಧ ನಾಳ ವಿನ್ಯಾಸ ದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು ಒಂದರಿಂದ ಎರಡು ಹಾಲೆಗಳನ್ನು ಹೊಂದಿರುತ್ತವೆ ಹಾಗೂ ಮೃದು- ತುಪ್ಪಳದಿಂದ ಕೂಡಿರುತ್ತವೆ;ಬೀಜಗಳು ಎರಡು.

ಜೀವಪರಿಸ್ಥಿತಿ :

1400 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಮತ್ತುಅರೆನಿತ್ಯ ಹರಿದ್ವರ್ಣ ಕಾಡುಗಳಒಳಛಾವಣಿ ಮರಗಳಾಗಿ ಈ ಸಸ್ಯ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ;ಪಶ್ಚಿಮ ಘಟ್ಟಗಳ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ

ಗ್ರಂಥ ಸೂಚಿ :

Engler and Prantl, Nat. Pflanzenf. 3(4): 348.1896; Gamble,Fl.Madras 1:188.1997(re.ed.); Sasidharan, Biodiversity documentation for Kerala- Flowering Plants, part 6:92.2004; Saldanha, Fl.Karnataka 2:108.1996

Top of the Page