ಡಯೋಸ್ಪೈರಾಸ್ ಅಂಗುಸ್ಟಿಫೋಲಿಯ (Miq.) Kosterm - ಎಬೆನೇಸಿ

Synonym : Maba angustifoliaMiq.; Diospyros nigrescens (Dalz.) Saldanha

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಗುಬುಟುಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಕಿತ್ತಳೆ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಕಿರಿದಾದ ಅಂತರ-ಗಿಣ್ಣುಗಳ ಸಮೇತವಿರುತ್ತವೆ; ತುದಿಯಲ್ಲಿನ ಎಳೆಯ ಕಿರುಕೊಂಬೆಗಳು ದಟ್ಟವಾದ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟವಾದ ಒರಟು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 ಸೆಂ.ಮೀ. ಉದ್ದವಿದ್ದು, ದುಂಡಾಗಿದ್ದು, ಎಳೆಯದಾಗಿದ್ದಾಗ ಕೆಂಗಂದು ಬಣ್ಣದ ರೋಮಗಳನ್ನು ಹೊಂದಿರುತ್ತವೆ. ಪತ್ರಗಳು 2.2 - 8 X 1 -2.5 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತಾಕಾರದಲ್ಲಿದ್ದು ಮೊಂಡು ಅಗ್ರವುಳ್ಳ ಚೂಪಾದುದರಿಂದ ಹಿಡಿದು ಚೂಪಲ್ಲದ ತುದಿ, ಚೂಪಾದ ಬುಡ, ದಪ್ಪವಾದ ಮತ್ತು ಪ್ರಮುಖವಾಗಿ ತರಂಗಿತವಾದ ಅಂಚು ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಪತ್ರಗಳು ಎಳೆಯದಾಗಿದ್ದಾಗ ರೋಮಸಹಿತವಾಗಿರುತ್ತವೆ ಉಳಿದ ಸಂಧರ್ಭಗಳಲ್ಲಿ ರೋಮರಹಿತವಾಗಿರುತ್ತವೆ ;ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿದ್ದು ಕವಲುಗಳನ್ನು ಹೊಂದಿರುತ್ತವೆ;ಮೂರನೇ ದರ್ಜೆಯ ನಾಳಗಳು ಪ್ರಮುಖವಾಗಿ ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛದಲ್ಲಿರುತ್ತವೆ; ಒಂದು ಗುಚ್ಛದಲ್ಲಿ 3 ಹೂಗಳಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ, ಪುಷ್ಪದಳಗಳು ಬಿಳಿ ಬಣ್ಣದಲ್ಲಿರುತ್ತದೆ.
ಕಾಯಿ / ಬೀಜ : ಬೆರ್ರಿಗಳು ಅಂಡವೃತ್ತಾಕಾರದಲ್ಲಿದ್ದು 1 ಸೆಂ.ಮೀ. ಉದ್ದವಿರುತ್ತವೆ; ಕಾಯಿಗಳ ಪುಷ್ಪಪಾತ್ರೆಗಳ ದಳಗಳು 3 ಇದ್ದು, ಸ್ವಲ್ಪಮಟ್ಟಿಗೆ ವಿಸ್ತಾರಗೊಂಡಿರುತ್ತವೆ ಹಾಗೂ 1 ರಿಒಂದ 3 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಕಡಿಮೆ (700 ಮೀ) ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಅಪರೂಪವಾಗಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಸಸ್ಯ ಚಿಕ್ಕಮಗಳೂರಿಗಿಂತ ಮೇಲಿನ ಮಧ್ಯ ಸಹ್ಯಾದ್ರಿ ಪ್ರದೇಶಗಳಿಗೆ ಬಹುತೇಕವಾಗಿ ಸೀಮಿತವಾಗಿದೆ.

ಸ್ಥಿತಿ :

ಇತ್ತೀಚೆಗೆ ಈ ಪ್ರಭೇದವನ್ನು ಡಯೋಸ್ಪೈರಾಸ್ ನೀಲ್ಘೆರೆನ್ಸಿಸ್ (Wt.) Kosterm. (Monograph on Indian Diospyros, Singh, 2005) ಜೊತೆಗೆ ಲೀನ ಮಾಡಲಾಗಿದೆ. ಆದರೆ ಈ ಸಸ್ಯ ಭಿನ್ನವಾದ ಜೀವಪರಿಸ್ಥಿತಿಗೆ ಸೇರಿರುವುದರಿಂದ ನಾವು ಈ ಪ್ರಭೇದವನ್ನು ಪ್ರತ್ಯೇಕವಾಗಿ ಪರಿಗಣಿಸಿದ್ದೇವೆ.

ಗ್ರಂಥ ಸೂಚಿ :

SriLanka J. Sci.12: 106.1971;Gamble,Fl.Madras 1:773.1997(re.ed.);

Top of the Page