ಡಯೋಸ್ಪೈರಾಸ್ ಅಸ್ಸಿಮಿಲಿಸ್ Bedd. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿರುತ್ತವೆ; ಕಚ್ಚು ಮಾಡಿದ ಜಾಗ ಮಂದ ಕಿತ್ತಳೆ ಬಣ್ಣಹೊಂದಿದ್ದು ವಿಶಿಷ್ಟವಾಗಿ ತೊಗಟೆಯ ಒಳಬಾಗದಲ್ಲಿ ಕಡು ಕಿತ್ತಳೆ ವರೆಗಿನ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 1ಸೆಂ.ಮೀಉದ್ದವಿದ್ದು, ರೋಮರಹಿತವಾಗಿದ್ದು ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ. ಪತ್ರಗಳು 7-15.2 X 2.5 – 6 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಚತುರಸ್ರದಿಂದ ಅಂಡವೃತ್ತಾಕಾರದಲ್ಲಿದ್ದು ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ದುಂಡಾದ ಬುಡ, ನಯವಾದ ಅಂಚು ಹಾಗೂ ತೊಗಲು ಅಥವಾ ಉಪ-ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಕೊಂಚ ಅಚ್ಚೊತ್ತಿದಂತಿರುತ್ತವೆ;ಎರಡನೇ ದರ್ಜೆಯ ನಾಳಗಳು 4 ರಿಂದ 7ಜೋಡಿಗಳಿದ್ದು, ಆರೋಹಣ ಮಾದರಿಯಲ್ಲಿರುತ್ತವೆ, ತೀರಾ ತಳಗಿನ 2 ಜೋಡಿಗಳು ಓರೆಯಾಗಿದ್ದು ಸನಿಹವಾಗಿರುತ್ತವೆ.ಮೂರನೇ ದರ್ಜೆಯ ನಾಳಗಳು ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ ಅಥವಾ ದುರ್ಬಲವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಬಿಳಿ ಬಣ್ಣದಲ್ಲಿದ್ದು,ಕೊಳವೆಯಾಕಾರದವುಗಳಾಗಿದ್ದು, ಅಕ್ಷಾಕಂಕುಳಿನಲ್ಲಿನ ಗುಚ್ಛದಲ್ಲಿ ಅಥವಾ ಕಿರಿದಾದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ತೊಟ್ಟುರಹಿತವಾಗಿದ್ದು ಒಂಟಿಯಾಗಿರುತ್ತವೆ,
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿರುತ್ತವೆ; ಪುಷ್ಪಪಾತ್ರೆಯ ಸುತ್ತುಕಟ್ಟು ಉಬ್ಬಿರುತ್ತದೆ; ದಳಗಳು ಹಿಂಬಾಗಿರುತ್ತವೆ; ಬೀಜಗಳು 6.

ಜೀವಪರಿಸ್ಥಿತಿ :

ಕಡಿಮೆ (900 ಮೀ) ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ.

ಗ್ರಂಥ ಸೂಚಿ :

Madras For. Rep.20.1.1866-1867 ; Gamble, Fl. Madras 2:775.1997(rep.ed.); Sasidharan, Biodiversity documentation for Kerala-Flowering Plants,part 6,269.2004: Singh, Monograph on Indian Diospyros L.(persimmon, Ebony)Ebenaceae 44.2005

Top of the Page