ಡಯೋಸ್ಪೈರಾಸ್ ಬೋರ್ಡಿಲೋನಿ Brand. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 28 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ಕಂದು ಬಣ್ಣದ ಸೂಕ್ಷ್ಮ-ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.7 ಸೆಂ.ಮೀಉದ್ದವಿರುತ್ತವೆ ,ಕಾಲುವೆ ಗೆರೆಗಳನ್ನೊಳಗೊಂಡಿರುತ್ತವೆ ಹಾಗೂ ಎಳೆಯದಾಗಿದ್ದಾಗ ರೋಮಸಹಿತವಾಗಿದ್ದು ಬಲಿತ ನಂತರ ರೋಮರಹಿತವಾಗುತ್ತವೆ; ಪತ್ರಗಳು 5 -15 X1. 8 – .5 ಸೆಂ.ಮೀ. ಗಾತ್ರ, ಅಂಡವೃತ್ತ – ಚತುರಸ್ರದ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ, ಉಪ-ತೊಗಲನ್ನೋಲುವ, ರೋಮರಹಿತವಾದ ಹಾಗೂ ಹೊಳಪುಳ್ಳ ಮೇಲ್ಮೈ ಹೊಂದಿರುತ್ತವೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ.; ಎರಡನೇ ದರ್ಜೆಯ ನಾಳಗಳು 6 - 8ಜೋಡಿಗಳಿದ್ದು ತೆಳುವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರಹೊಂದಿದ್ದು,ಲಂಬರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳು; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿದ್ದು ಕಂದು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತವೆ; ಹೆಣ್ಣು ಹೂಗಳು ಕಾಂಡಜನ್ಮಿ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂದಾಜು 7 ಸೆಂ. ಮೀ. ವ್ಯಾಸ ಹೊಂದಿದ್ದು, ದಾರು ರೀತಿಯದ್ದಾಗಿದ್ದು ಗೋಳಾಕಾರದಲ್ಲಿರುತ್ತವೆ; ಕಾಯಿಗಳ ಪುಷ್ಪಪಾತ್ರೆ ದಾರುವಿನ ರೀತಿಯವು; ಬೀಜಗಳು 10 ವರೆಗೆ ಚತುರಸ್ರ–ಅಂಡದ ಆಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 900 ಮೀ.ವರೆಗಿನ ಎತ್ತರದನ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮತ್ತು ಉಪ- ಮೇಲ್ಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Indian trees 435.1906;Singh, Monograph on Indian Diospyros L.(Persimmon, Ebony)Ebenaceae 54.2005; Gamble, Fl. Madras 2: 777.19979 (rep.ed.); Sasidharan, Biodiversity documentation for Kerala-Flowering Plants,part 6,270.2004:

Top of the Page