ಡಯೋಸ್ಪೈರಾಸ್ ಊಕಾರ್ಪ Thw. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಚಕ್ಕೆರೂಪದಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ..
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಎಳೆಯದಾಗಿದ್ದಾಗ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣವುಳ್ಳ ಮೃದುತುಪ್ಪಳದಿಂದ ಕೂಡಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.6 -1.0 ಸೆಂಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿ ಇರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು 5 – 12 X 3 – 7.5 ಸೆಂ.ಮೀ. ಗಾತ್ರ, ಸಂಕುಚಿತ-ಅಂಡಾಕಾರದಿಂದ ಅಂಡಾಕಾರದ ಆಕಾರ ಹೊಂದಿದ್ದು, ಮೊಂಡಾದ ಅಗ್ರವುಳ್ಳ ಚೂಪಾದ ಅಥವಾ ಕ್ರಮೇಣ ಚೂಪಾಗುವ ತುದಿ ; ಚೂಪಾದ ಬುಡ, ನಯವಾದ ಅಂಚು, ತೊಗಲವನ್ನೋಲುವ ಮೇಲ್ಮೈ ಹೊಂದಿದ್ದು, ರೋಮರಹಿತವಾಗಿರುತ್ತವೆ ಹಾಗೂ ಒಣಗಿದಾಗ ಕಂದು ಬಣ್ಣದಲ್ಲಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು ಪ್ರಮುಖವಾಗಿ ಕಾಣದ ಅಂದಾಜು 5-8 ಜೋಡಿಗಳಿರುತ್ತವೆ, ತೀರಾ ತಳಗಿನ ನಾಳಗಳು ಸನಿಹದಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಕೆನೆ ಬಣ್ಣದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ತೊಟ್ಟುರಹಿತವಾದ ಗುಚ್ಛಗಳಲ್ಲಿರುತ್ತವೆ; ಒಂದರಿಂದ ಮೂರು ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಚತುರಸ್ರ – ಅಂಡಾಕಾರದಲ್ಲಿದ್ದು, 2.3 X 3.5 ಸೆಂ.ಮೀ. ಗಾತ್ರ, ಸುಕ್ಕು- ಸುಕ್ಕಾದ ಮೇಲ್ಮೈ ಹೊಂದಿದ್ದು ದೃಢವಾಗಿ ಉಳಿಯುವ ಪುಷ್ಪಪಾತ್ರೆ ಸಮೇತವಿರುತ್ತದೆ.ಬೀಜಗಳು ಕೋಶಕ್ಕೊಂದು ಇರುತ್ತದೆ.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮತ್ತು ಉಪ- ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಮಧ್ಯ ಸಹ್ಯಾದ್ರಿ ಮತ್ತು ಉತ್ತರ ಸಹ್ಯಾದ್ರಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Thwaites, Enum. Pl.Zel.180.1860;;Gamble, Fl. Madras 2:774.1997(rep.ed.);Biodiversity ;Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L.(Persimmon, Ebony)Ebenaceae 182.2005. Saldanha,Fl.Karnataka.1;339.1996

Top of the Page