ಡಯೋಸ್ಪೈರಾಸ್ ಒವಾಲಿಫೋಲಿಯ Wt. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ವಿರಳವಾಗಿ ಅಪ್ಪು-ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 -1.0 ಸೆಂಮೀ.ಉದ್ದವಿದ್ದು, ಕಾಲುವೆ ಗೆರೆ ಸಮೇತವಾಗಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 5 – 13 X 1.5 – 5 ಸೆಂ.ಮೀ. ಗಾತ್ರ, ಸಾಮಾನ್ಯವಾಗಿ ಬುಗುರಿಯ ಆಕಾರ ಹೊಂದಿದ್ದು, ಚೂಪಲ್ಲದುದರಿಂದ ಹಿಡಿದು ದುಂಡಾದ ತುದಿ, ಚೂಪಾದುದರಿಂದ ಬೆಣೆಯಾಕಾರದ ಬುಡ, ನಯವಾದ ಅಂಚು, ತೊಗಲವನ್ನೋಲುವ ಮೇಲ್ಮೈ ಹೊಂದಿದ್ದು, ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಾಗಿರುತ್ತದೆ ಹಾಗೂ ತಳಭಾಗದಲ್ಲಿ ದೃಢವಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 - 9 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾದ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಹಳದಿ ಬಣ್ಣದಲ್ಲಿದ್ದು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿ ಸಾಮಾನ್ಯವಾಗಿ ಹಳೆಯ ಕಾಂಡಗಳ ಮೇಲಿರುತ್ತವೆ; ಹೆಣ್ಣು ಹೂಗಳು ಎಲೆಗಳ ಅಕ್ಷಾಕಂಕುಳಿನಲ್ಲಿ ಅಥವಾ ಹಳೆಯ ಕಾಂಡಗಳಮೇಲೆ ಒಂಟಿಯಾಗಿ ಅಥವಾ 2 ರಿಂದ 6 ಹೂಗಳು ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 2 ಸೆಂ. ಮೀ ವರೆಗಿನ ವ್ಯಾಸ ಹೊಂದಿದ್ದು, ಉಪ-ತೊಟ್ಟು ಸಮೇತವಾಗಿದ್ದು ಗೋಳಾಕಾರದಲ್ಲಿರುತ್ತವೆ;ಕಾಯಿಗಳ ಪುಷ್ಪಪಾತ್ರೆ ಹಿಂಸುರುಳಿಯಾಗಿರುತ್ತದೆ; ಬೀಜ ಒಂದು.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದ ಪ್ರದೇಶಗಳ ಒಣ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿಯ ಬೆಟ್ಟದ ಗಾಳಿ ಮರೆಯ ದಿಕ್ಕಿನ ಪ್ರದೇಶಗಳು

ಗ್ರಂಥ ಸೂಚಿ :

Wight , Ic.t.1227.1848;;Gamble, Fl. Madras 2:774.1997(rep.ed.);Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L.(Persimmon, Ebony)Ebenaceae 185. 2005. Saldanha,Fl.Karnataka.1:340.1996

Top of the Page