ಡಯೋಸ್ಪೈರಾಸ್ ಪೈರೋಕಾರ್ಪಾಯ್ಡಿಸ್ Ramesh & Franceschi - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ :
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.2 ಸೆಂ. ಮೀ.ಉದ್ದವಿದ್ದು, ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತವೆ; ಪತ್ರಗಳು 7 – 13 X 2.5 – 7 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತ- ಚತುರಸ್ರದಿಂದ ಬುಗುರಿ-ಭರ್ಜಿವರೆಗಿನ ಆಕಾರ ಹೊಂದಿದ್ದು ಕಿರಿದಾದ ಮತ್ತು ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ಅಥವಾ ಚೂಪಾದ ತುದಿ ,ದುಂಡಾದ ಮತ್ತು ಸ್ವಲ್ಪ ಮಟ್ಟಿಗೆ ತಳಭಾಗಕ್ಕೆ ವಿಸ್ತರಿಸಿದ ಬುಡ, ಉಪ-ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ ಹಾಗೂರೋಮರಹಿತವಾಗಿದ್ದು ಬಹು ಸೂಕ್ಷ್ಮವಾದ ಜಾಲಬಂಧ ನಾಳ ವಿನ್ಯಾಸ ಹೊಂದಿದ ನಾಳಸಮೇತವಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 8 -13 ಜೋಡಿಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿರುತ್ತವೆ; ಗಂಡು ಹೂಗಳು ಸಣ್ಣ ಗಾತ್ರದ, 3 ರಿಂದ 4 ಉಪ-ತೊಟ್ಟುಸಹಿತವಿರುವ ಹೂಗಳುಳ್ಳ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಉಪ-ತೊಟ್ಟು ಹೊಂದಿದ್ದು ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 3 ಸೆಂ.ಮೀ.ಅಡ್ಡಗಲದಳತೆ ಹೊಂದಿದ್ದು ದಟ್ಟವಾದ ಕಂದು ಬಣ್ಣವುಳ್ಳ ಮೃದುತುಪ್ಪಳದಿಂದ ಕೂಡಿರುತ್ತವೆ; ಪುಷ್ಪಪಾತ್ರೆ ವೃದ್ಧಿಸಿದ್ದು, ತರಂಗಿತ ಅಂಚುಹೊಂದಿದ್ದು ಪ್ರಬಲವಾಗಿ ಹಿಂಚಾಚಿರುತ್ತದೆ;ಬೀಜಗಳು 1 ರಿಂದ 4.

ಜೀವಪರಿಸ್ಥಿತಿ :

600 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಅಂಡಮಾನ್ ದ್ವೀಪಗಳು:ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ದಕ್ಷಿಣ ಭಾಗದಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Blumea 38(1): 131.1993;Sasidharan, Biodiversity documentation for Kerala-Flowering Plants,part 6.272. 2004; Singh, Monograph on Indian Diospyros L.(Persimmon, Ebony) Ebenaceae 213. 2005.

Top of the Page