ಡಯೋಸ್ಪೈರಾಸ್ ಸಲ್ಡಾ ನ್ಹೆ Kostermans - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪಾಗಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಮಂದವಾದ ಕೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದಟ್ಟವಾದ ಹಾಗೂ ಉದ್ದವಾದ (0.25 ಸೆ.ಮೀ.) ಕೂದಲುಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.2 -0.4 ಸೆಂ. ಮೀ.ಉದ್ದವಿದ್ದು ದೃಢವಾಗಿದ್ದು, ದಟ್ಟ ಒರಟು ರೋಮಗಳಿಂದ ಕೂಡಿರುತ್ತವೆ; ಪತ್ರಗಳು 5 – 14 X 2.2 – 6 ಸೆಂ.ಮೀ. ಗಾತ್ರ, ಚತುರಸ್ರ ಅಥವಾ ಬುಗುರಿ-ಭರ್ಜಿವರೆಗಿನ ಆಕಾರ ಹೊಂದಿದ್ದು ಮೊಂಡು-ಚೂಪು ಮಾದರಿಯಿಂದ ಕ್ರಮೇಣ ಚೂಪಾಗುವ ತುದಿ , ದುಂಡಾದುದರಿಂದ ಉಪ-ಹೃದಯಾಕಾರದ ಬುಡ, ಉಪ-ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ ;ಪತ್ರ ಎಳೆಯದಾಗಿದ್ದಾಗ ಎರಡೂ ಬದಿಯಲ್ಲಿ, ದಟ್ಟವಾಗಿ ಮೃದುವಾದ ರೋಮಗಳಿಂದ ಕೂಡಿದ್ದು ನಂತರ ಮಧ್ಯನಾಳ ಹೊರತು ಪಡಿಸಿ ಮಿಕ್ಕೆಲ್ಲಾ ಭಾಗಗಳು ರೋಮರಹಿತವಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು 6 -11 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ, 1 ರಿಂದ 3 ಹೂಗಳುಳ್ಳ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಶಂಖು ಅಥವಾ ಅಂಡವೃತ್ತ – ಅಂಡಾಕಾರ ಹೊಂದಿದ್ದು ಕೆಂಗಂದು ಬಣ್ಣದ ಬಿರುಗೂದಲುಗಳಿಂದ ಕೂಡಿರುತ್ತವೆ; ಕಾಯಿಗಳ ಪುಷ್ಪಪಾತ್ರೆಯ ದಳಗಳು ಚತುರಸ್ರಾಕಾರದಲ್ಲಿರುತ್ತವೆ;ಬೀಜಗಳು 3 ರಿಂದ 4.

ಜೀವಪರಿಸ್ಥಿತಿ :

900 ಮೀ.ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಮುಖ್ಯವಾಗಿ ಮಧ್ಯ ಸಹ್ಯಾದ್ರಿಯಲ್ಲಿಕಂಡು ಬರುತ್ತದೆ.

ಗ್ರಂಥ ಸೂಚಿ :

J. Bombay Nat. Hist. Soc. 74:326. 1978;Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L. (Persimmon, Ebony)Ebenaceae 225. 2005. Saldanha,Fl.Karnataka.1:341.1996

Top of the Page