ಡಿಪ್ಟೆರೋಕಾರ್ಪಸ್ ಬೋರ್ಡಿಲೋನಿ Brandis - ಡಿಪ್ಟೆರೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 50 ಮೀ. ಎತ್ತರದವರೆಗೆ ಬೆಳೆಯುವ ಬಹುಎತ್ತರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ದಟ್ಟವಾದ ಹಳದಿ ಬಣ್ಣದ ಮೃದು ತುಪ್ಪಳದಿಂದ ಹಾಗೂ ಉದುರಿದ ಕಾವಿನೆಲೆಗಳಿಂದುಂಟಾದ ವಲಯಾಕಾರದ ಗುರುತುಗಳಿಂದ ಕೂಡಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತಹವು,ಅಂಡಾಕಾರ-ಭರ್ಜಿಯ ಆಕಾರದಲ್ಲಿದ್ದು, 1.8 ಸೆಂ.ಮೀ. ವರೆಗಿನ ಉದ್ದ, ಹಳದಿ ಒರಟು ರೋಮಗಳಿಂದ ಕೂಡಿದ ಹೊರಮೈ ಹೊಂದಿದು ಒಳಮೈರೋಮರಹಿತವಾಗಿರುತ್ತವೆ; ಎಲೆತೊಟ್ಟುಗಳು 4.5 ಸೆಂ.ಮೀ. ಉದ್ದ ಹೊಂದಿದ್ದು, ನಕ್ಷತ್ರಾಕಾರದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 20.5-15 ರೆಗಿನ ಗಾತ್ರ, ವಿಶಾಲವಾದ ಅಂಡವೃತ್ತದಿಂದ ಅಂಡಾಕಾರದ ಆಕಾರ ಹೊಂದಿರುತ್ತವೆ;ಪತ್ರದ ತುದಿ ಸಂಕ್ಷೇಪವಾದ ಕ್ರಮೇಣವಾಗಿ ಚೂಪಾಗುವ ರೀತಿಯದಾಗಿದ್ದು ಬುಡ ದುಂಡಾಕಾರ ಅಥವಾ ಉಪ-ಹೃದಯಾಕಾರದಲ್ಲಿರುತ್ತದೆ, ಅಂಚು ನಯವಾಗಿರುತ್ತದೆ ಅಥವಾ ದುಂಡೇಣಿನ ಹಲ್ಲುಗಳ ಸಮೇತವಿರುತ್ತದೆ; ಪತ್ರಗಳು ತೊಗಲನ್ನೋಲುವ ಮಾದರಿಯಲ್ಲಿದ್ದು ಮೇಲ್ಭಾಗದಲ್ಲಿ ರೋಮರಹಿತವಾಗಿದ್ದು ತಳಭಾಗದಲ್ಲಿ ನಕ್ಷತ್ರಾಕಾರದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ- ಗೆರೆಗಳಿಂದ ಕೂಡಿರುತ್ತದೆ;ಎರಡನೇ ದರ್ಜೆಯ ನಾಳಗಳು13 ರಿಂದ 16 ಧೃಢವಾದ ಜೋಡಿಗಳಿದ್ದು ಹೆಚ್ಚೂ ಕಡಿಮೆ ಸಮಾನಾಂತರದಲ್ಲಿದ್ದು ಹಠಾತ್ತನೆ ಪತ್ರದ ಅಂಚಿನ ಬಳಿ ಬಾಗುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು, ಹೆಚ್ಚೂ ಕಡಿಮೆ ಸಮಾನಾಂತರದಲ್ಲಿದ್ದು ಹಾಗೂ ಮಧ್ಯನಾಳಕ್ಕೆ ಓರೆಯಾಗಿ -ರುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಬಿಳಿಬಣ್ಣದವುಗಳಾಗಿದ್ದು ಮಧ್ಯಾಭಿಸರ ಮಾದರಿಯ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು 2.5 ಸೆಂ. ಮೀ. ವರೆಗಿನ ಅಡ್ಡಗಲ ಹೊಂದಿದ್ದು, ಕರಟ ಮಾದರಿಯವು ಹಾಗೂ 5-ರೆಕ್ಕೆಗಳುಳ್ಳ ಪುಷ್ಪಪಾತ್ರೆಯ ನಾಳದಿಂದ ಆವೃತವಾಗಿರುತ್ತವೆ; ಪುಷ್ಪಪಾತ್ರೆಯ ಪತ್ರಗಳು ವೃದ್ಧಿಸಿದ ರೀತಿಯವು ಹಾಗೂ 2 ದೊಡ್ಡದಾದ ಮತ್ತು 3 ಕಿರಿದಾದ ಹಾಗೂ ಜಾಲಬಂಧ ನಾಳ ವಿನ್ಯಾಸ ಹೊಂದಿರುವ ಪತ್ರಗಳನ್ನು ಹೊಂದಿರುತ್ತವೆ; ಬೀಜಗಳು 1 ರಿಂದ 2.

ಜೀವಪರಿಸ್ಥಿತಿ :

ಕಡಿಮೆ ಎತ್ತರದ ಪ್ರದೇಶ (600ಮೀ.)ಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೊರಹೊಮ್ಮುವ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ದಕ್ಷಿಣ ಸಹ್ಯಾದ್ರಿಯ ಆಶೆನ್ಕೊಟ್ಟಪಾಸ್ ಮತ್ತು ಪಾಲ್ಘಾಟ್ ಗ್ಯಾಪ್ ಪ್ರದೇಶದ ದಕ್ಷಿಣ ಅಂಚಿನಲ್ಲಿ ಆಗಾಗ್ಗೆ ಮತ್ತು ಪಾಲ್ಘಾಟ್ ಗ್ಯಾಪಿನ ಉತ್ತರ ಭಾಗದ ಪಾಲಕ್ಕಾಡ್ ಬೆಟ್ಟಗಳು,ನೀಲಂಬುರ್ ಘಾಟಿ ಮತ್ತು ಕೊಡಗಿನ ಪುಷ್ಪಗಿರಿ ಪ್ರದೇಶಗಳಲ್ಲಿ ಅಲ್ಲಲ್ಲಿಈ ಸಸ್ಯ ವ್ಯಾಪಿಸಿದೆ

ಗ್ರಂಥ ಸೂಚಿ :

Hooker, Icon. Pl.5 (1). 2403.1895;Gamble,Fl.Madras 1:81.1997(re.ed.); Sasidharan, Biodiversity documentation for Kerala- Flowering Plants, part 6:44.2004;

Top of the Page