ಡೈಸೋಜೈಲಮ್ ಬೆಡ್ಡೋಮಿಯೈ Hiern - ಮೀಲಿಯೇಸಿ

:

Vernacular names : Tamil: ಕೈಪನರಂಗಿ; ಪೊಟ್ಟಿ; ಪುಳ್ಳಿಪಂಚೆಡ್ಡಿMalayalam: ಸಿಡಿಗೋಲಿ; ಚೆಡುಬೀರ; ಬೆಟ್ಟದ ಬೇವು;

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಬೂದು ಬಣ್ಣದಲ್ಲಿದ್ದು ಗಂತಿ ರೀತಿಯ ಸೂಕ್ಷ್ಮ ಬೆಂಡು ರಂಧ್ರ ಸಮೇತವಿರುತ್ತವೆ ಹಾಗೂ ಪೊರೆ ರೂಪದಲ್ಲಿ ಚಕ್ಕೆ ಏಳುವ ಮಾದರಿಯಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ಅಸಮ ಗರಿ ರೂಪಿಗಳಾಗಿದ್ದು 30 ಸೆಂ.ಮೀ.ವರೆಗಿನ ಉದ್ದವಿರುತ್ತವೆ, ಜೋಡನೆ ಯಲ್ಲಿ ಪರ್ಯಾಯ ಮತ್ತು ಸುತ್ತು ವ್ಯವಸ್ಥೆ ಮಾದರಿಯಲ್ಲಿದ್ದು ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ; ನಡುಕಾಂಡ ಕೋನಯುಕ್ತವಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಕಿರುಎಲೆ ತೊಟ್ಟುಗಳು ಅಂದಾಜು0.8 ಸೆಂ.ಮೀ. ಉದ್ದವಿರುತ್ತವೆ;ಕಿರುಪತ್ರಗಳು 7-9 ಜೋಡಿಗಳಿದ್ದು ಪರ್ಯಾಯ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು 10-15 X 4- 5.5 ಸೆಂ. ಮೀ. ಗಾತ್ರ, ಧೀರ್ಘ ಚತುರಸ್ರದ ಆಕಾರ,ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ,ಚೂಪಾದ ಮತ್ತು ಅಸಮವಾದ ಬುಡ,ನಯವಾದ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 20 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಕಿರಿದಾದ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಅಥವಾ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಲ್ಲಿರುತ್ತವೆ;ಹೂಗಳು ಹಳದಿ ಮಿಶ್ರಿತ ಹಳದಿ ಬಣ್ಣದಲ್ಲಿದ್ದು ಉಪ-ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ದುಂಡಾಗಿದ್ದು ಸೂಕ್ಷ್ಮ ಮೊನಚು ಮುಳ್ಳಿನ ಸಮೇತವಿದ್ದು 7 X 5 ಸೆಂ.ಮೀ. ಗಾತ್ರವಿದ್ದುಆಳವಿಲ್ಲದ ಲಂಬವಾದ ಏಣುಗಳನ್ನು ಹೊಂದಿರುತ್ತದೆ; ಬೀಜಗಳು 2 -4 ಇದ್ದು ಕಿತ್ತಳೆ- ಹಳದಿ ಬಣ್ಣದ ಪತ್ರೆ ಸಮೇತವಾಗಿರುತ್ತದೆ.

ಜೀವಪರಿಸ್ಥಿತಿ :

300 ಮತ್ತು 1200 ಮೀ. ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮೇಲ್ಛಾವಣಿ ಮರಗಳಾಗಿ ಆಗಾಗ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ಏಲಮಲೈ ಮತ್ತು ಅಣ್ಣಾಮಲೈ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN, 2000)

ಗ್ರಂಥ ಸೂಚಿ :

Hooker, Fl.Brit.india1:548; Gamble, Fl. Madras 178.1997(rep.ed.); Sasidharan, Biodiversity documentation for Kerala- Flowering Plants, part 6:89.2004.

Top of the Page