ಎಲೆಯೋಕಾರ್ಪಸ್ ಟ್ಯೂಬರ್ಕ್ಯುಲೇಟಸ್ Roxb. - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಹಲಗೆ ಮಾದರಿಯ ಆನಿಕೆಗಳನ್ನುಳ್ಳ,40 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮತ್ತು ಬಿಳಿ ಚುಕ್ಕೆಗಳಿಂದ ಕೂಡಿದ್ದು ನಯವಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಲಂಬ ರೇಖೆಗೆ ಸಮ ಕೋನದಲ್ಲಿರುತ್ತವೆ;ಕಿರುಕೊಂಬೆಗಳು ದಪ್ಪವಾಗಿದ್ದು ಎಲೆಉದುರಿದ ಗುರುತು ಸಮೇತವಿದ್ದು ಎಳೆಯದಾಗಿರುವಾಗ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಅಂಡಾಕಾರ ಹೊಂದಿದ್ದು,ಕೊಂಚ ಒಳಬಾಗಿರುತ್ತವೆ ಹಾಗೂ ಉದುರಿ ಹೋಗುವಂತಹವು;ತೊಟ್ಟುಗಳು 1.5 - 5 ಸೆಂ.ಮೀ. ಉದ್ದವಿದ್ದು,ಎಳೇಯದಾಗಿದ್ದಾಗ ಕೆಂಗಂದು ಬಣ್ಣದ ದಟ್ಟ ಮೃದು ತುಪ್ಪಳ ಸಮೇತವಿರುತ್ತವೆ ಹಾಗೂ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯ ಆಕಾರ ಹೊಂದಿರುತ್ತವೆ ;ಪತ್ರಗಳು 9 – 30.5 X 5 – 14 ಸೆಂ. ಮೀ. ಗಾತ್ರ, ವಿಶಾಲ ಬುಗುರಿಯ ಆಕಾರ, ದುಂಡಾದುದರಿಂದ ಹಿಡಿದು ಚೂಪಲ್ಲದ ಅಥವಾ ಕೆಲವು ವೇಳೆ ದುಂಡಗಿನ ತುದಿಯಲ್ಲಿ ಕಚ್ಚುಳ್ಳ ಮಾದರಿಯ ತುದಿ, ಸಂಕುಚಿತ ಅಥವಾ ಸಂಕುಚಿತವಾಗಿದ್ದು ಚೂಪಲ್ಲದ ಬುಡ , ಉಪ-ನಯವಾದ ಅಥವಾ ದುಂಡೇಣು ಹಲ್ಲುಳ್ಳ- ಗರಗಸ ದಂತಿತ ಮಾದರಿಯ ಅಂಚು ,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ಎಳೆಯದಾಗಿದ್ದಾಗ ದಟ್ಟವಾದ ಕೆಂಗಂದು ಬಣ್ಣದ ದಟ್ಟಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು ಬಲಿತಾಗ ಮಧ್ಯನಾಳ ಮತ್ತು ಇತರ ನಾಳಗಳ ಮೇಲೆ ಮಾತ್ರ ರೋಮಗಳಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;; ಎರಡನೇ ದರ್ಜೆಯ ನಾಳಗಳು 9-14 ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲವಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಹೊರ ಅಕ್ಷಾ ಕಂಕುಳಿನಲ್ಲಿರುವ ಅಥವಾ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಮಾದರಿಯವು ಹಾಗೂ ಕೆಂಗಂದು ಬಣ್ಣದ ದಟ್ಟಮೃದು ತುಪ್ಪಳದಿಂದ ಕೂಡಿರುವಂತಹವು.;ಹೂಗಳು ಬಿಳಿ ಬಣ್ಣ ಹೊಂದಿದ್ದು ಆಳವಾದ ಸೀಳಿಕೆಗಳ ಸಮೇತವಿರುವ ಪುಷ್ಪದಳಗಳ ಸಮೇತವಿರುತ್ತವೆ . ಕೇಸರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಊಬುಸಹಿತವಾದ ಪರಾಗಾಶಯಗಳನ್ನು ಹೊಂದಿರುತ್ತವೆ..
ಕಾಯಿ /ಬೀಜ : ಡ್ರೂಪ್ಗಳು ಅಂಡವೃತ್ತ – ಚತುರಸ್ರದ ಆಕಾರದಲ್ಲಿದ್ದು 5 X 3 ಸೆಂ ಮೀ.ವರೆಗಿನ ಗಾತ್ರ ಹೊಂದಿರುತ್ತವೆ;ಬೀಜ ಒಂದಿದ್ದು, ಸಂಕುಚಿತವಾಗಿದ್ದು ಆಳವಾದ ಗುಬುಟುಗಳನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

1400 ವರೆಗಿನ ಪ್ರದೇಶಗಳಲ್ಲಿನ ತೊರೆಗಳ ಅಂಚಿನಲ್ಲಿರುವ ನಿತ್ಯಹರಿದ್ವರ್ಣದಿಂದ ಅರೆ- ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮತ್ತು ಹೊರಹೊಮ್ಮುವ ಮರಗಳಾಗಿ ಈ ಸಸ್ಯ ಸಾಮಾನ್ಯವಾಗಿ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ಗ್ರಂಥ ಸೂಚಿ :

Roxburgh, Fl. Ind. 2:594.1832;Gamble, Fl.Madras 1: 124.1997(rep.ed.);Sasidharan, Biodiversity documentation for Kerala- Flowering Plants,part 6, 65.2004: Saldanha, Fl. Karnataka 1:214. 1996.

Top of the Page