ಎಲೆಯೋಕಾರ್ಪಸ್ ವೇರಿಯಾಬಿಲಿಸ್ Zmarzty - ಎಲೆಯೋಕಾರ್ಪೇಸಿ

Synonym : ಎಲೆಯೋಕಾರ್ಪಸ್ ಗ್ಲಾಂಡ್ಯುಲೋಸಸ್ Wall. Ex Merr.;non ಎಲೆಯೋಕಾರ್ಪಸ್ ಟೆಕ್ಟೋರಿಯಸ್ (Lour.)Poir. ; ಎಲೆಯೋಕಾರ್ಪಸ್ ಒಬ್ಳಾಂಗಸ್ Gaertn. Sensu auct.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣಹೊಂದಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ; ಕಚ್ಚು ಮಾಡಿದ ಜಾಗ ಬಿಳಿಯಿಂದ ಹಿಡಿದು ಕೆನೆಯವರೆಗಿನ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು “ಆಬ್ರೆವಿಲ್ಲೆ “ ಮಾದರಿಯಲ್ಲಿರುತ್ತವೆ;ಕಿರುಕೊಂಬೆಗಳು ದುಂಡಾಗಿದ್ದು ಎಲೆಉದುರಿದ ಗುರುತು ಸಮೇತವಿದ್ದು. ವಾಯುವಿನಿಮಯ ಬೆಂಡು ರಂಧ್ರಗಳ ಸಹಿತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 3 ಸೆಂ.ಮೀ. ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯ ಆಕಾರ ಹೊಂದಿರುತ್ತವೆ ಮತ್ತು ಕೆನ್ನೀಲಿ ಬಣ್ಣ ಹೊಂದಿರುತ್ತವೆ;ಪತ್ರಗಳು 8 X 5 ಸೆಂ. ಮೀ. ಗಾತ್ರ, ಅಂಡವೃತ್ತ- ಚತುರಸ್ರದ ಆಕಾರ, ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಬುಡ , ಗರಗಸ ದಂತಿತ ಮಾದರಿಯ ಅಂಚು ,ಉಪ-ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು ಮುಪ್ಪಾದಾಗ ಕೆಂಪು ಬಣ್ಣ ಹೊದಿರುತ್ತವೆ; ಮಧ್ಯ ನಾಳ ಮತ್ತು ಇತರ ನಾಳಗಳು ಕೆನ್ನೀಲಿ ಬಣ್ಣದಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿದ್ದು ,ಕವಲುಗೊಂಡಿರುತ್ತದೆ ಹಾಗೂ ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ರೋಮರಹಿತವಾದ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾ ಕಂಕುಳಿನಲ್ಲಿರುವ ಮಧ್ಯಾಭಿಸರ ಮಾದರಿಯಲ್ಲಿದ್ದು, 15 ಸೆಂ.ಮೀ. ಉದ್ದ ಹೊಂದಿರುತ್ತದೆ;ಹೂ ತೊಟ್ಟುಗಳು 1 ಸೆಂ.ಮೀ. ಉದ್ದ ಹೊಂದಿದ್ದು ಕೆನ್ನೀಲಿ ಬಣ್ಣದಲ್ಲಿರುತ್ತದೆ;ಹೂಗಳು ಬಿಳಿ ಬಣ್ಣ ಹೊಂದಿದ್ದು ಆಳವಾದ ಸೀಳಿಕೆಗಳ ಸಮೇತವಿರುವ ಪು ಷ್ಪದಳಗಳ ಸಮೇತವಿರುತ್ತವೆ ; ಪರಾಗಾಶಯಗಳು ದಾಡಿ ಮತ್ತು ಊಬು ರಹಿತವಾಗಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಚತುರಸ್ರದ ಆಕಾರದಲ್ಲಿದ್ದು 4 X 3 ಸೆಂ ಮೀ.ವರೆಗಿನ ಗಾತ್ರ ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1400 ವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿಮತ್ತು ತೊರೆಗಳ ಅಂಚಿನಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಅಲ್ಲಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Kew Bull. 56: 405-447. 2001; Saldanha, Fl.Karnataka 1:211.1996.

Top of the Page