ಎರಿತ್ರೋಸೈಲಾನ್ ಮೂನಿಯೈ Hochr. - ಎರಿತ್ರೋಸೈಲೇಸಿ

Synonym : Erythroxylon acuminatum (Arn.) Walp.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ಚಪ್ಪಟೆಯಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು 0.3 ಸೆಂ. ಮೀ. ಉದ್ದವಿದ್ದು ಜೋಡಿಯಾಗಿರುತ್ತವೆ ಹಾಗೂ ಭರ್ಜಿಯ ಆಕಾರದಲ್ಲಿದ್ದು, ಉದುರಿಹೋಗುವಂತವು, ಉದುರಿದ ಜಾಗದಲ್ಲಿ ಗುರುತುಗಳನ್ನು ಶೇಷವಾಗಿರಿಸುತ್ತವೆ; ತೊಟ್ಟುಗಳು 0. 2 - 0.4 ಸೆಂ.ಮೀ.ವರೆಗಿನ ಉದ್ದಹೊಂದಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ;ಪತ್ರಗಳು 4 – 8 X 1.5 – 3 ಸೆಂ. ಮೀ. ಗಾತ್ರ, ಅಂಡವೃತ್ತ ಮಾದರಿಯ ಆಕಾರ, ಬಾಲರೂಪಿ- ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ,ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಮಸುಕಾಗಿ ಕಾಣುವಂತಹವು; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಒಂದು ಬೀಜವನ್ನೊಳಗೊಂಡಿದ್ದು ಸಂಕುಚಿತ ಅಂಡಾಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

ಮಧ್ಯಮ ಎತ್ತರದಲ್ಲಿನ( ಅಂದಾಜು 900 ಮೀ.)ನಿತ್ಯಹರಿದ್ವರ್ಣಕಾಡುಗಳ ಒಳಛಾವಣಿ ಮರಗಳಾಗಿ ಬೆಳೆಯುವ ಈ ಪ್ರಭೇದ ಅಪರೂಪವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ: ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯ ವಯನಾಡಿನಲ್ಲಿಈ ಪ್ರಭೇದ ವ್ಯಾಪಿಸಿದೆ.

ಸ್ಥಿತಿ :

ಅಪರೂಪ (Nayar, 1997)

ಗ್ರಂಥ ಸೂಚಿ :

Bull. Inst. Bot.Buitenzorg 22:54.1905; Fl. Pres.Madras 2: 127.1997 (rep.ed.);Sasidharan, Biodiversity documentation for Kerala- Flowering plants,part 6, 66.2004.

Top of the Page