ಎಕ್ಸ್ಕೋಕೇರಿಯ ಆಪೋಸಿಟಿಫೋಲಿಯ Griff. var. ಕ್ರೆನ್ಯುಲೇಟ (Wt.) Chakrab. & Gangop. - ಯೂಫೊರ್ಬಿಯೇಸಿ

Synonym : ಎಕ್ಸ್ಕೋಕೇರಿಯ ಕ್ರೆನ್ಯುಲೇಟ Wt. ಮತ್ತು ಎಕ್ಸ್ಕೋಕೇರಿಯ ರೊಬುಸ್ಟ Hk.f.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಬೆಳ್ಳಗಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖಿ-ಕತ್ತರಿಯಾಕಾರದ ಮಾದರಿ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವ ರೀತಿಯವುಗಳಾಗಿರುತ್ತವೆ. ತೊಟ್ಟುಗಳು ಅಂದಾಜು 0.7 – 1 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 15.2 X 3.8 ಸೆಂ. ಮೀ. ಗಾತ್ರ, ಬುಗುರಿ-ಭರ್ಜಿಯಿಂದ ಅಂಡವೃತ್ತ – ಭರ್ಜಿಯವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಚೂಪಾಗಿರುತ್ತವೆ;ಅಂಚು ಸೂಕ್ಷ್ಮ ದಂತಿತವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 16 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ. ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ತೆಳುವಾದ ಕದಿರು ಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿನ ಕೆಲವು ಹೂಗಳುಳ್ಳ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 3-ಹಾಲೆಗಳ ಸಮೇತವಿರುತ್ತವೆ ಮತ್ತು 3 ಉಪ-ಗೋಳಾಕಾರದ ಬೀಜಗಳನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

500 ರಿಂದ 2100 ಮೀ. ನಡುವಿನ ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀ ಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಫ್ರಬೇದ ವ್ಯಾಪಿಸಿದೆ.

ಗ್ರಂಥ ಸೂಚಿ :

JETB 18:208.1994;Wt.,Ic.t.1865.1852;Gamble, Fl.Madras 2:1345.1993 ;Sasidharan, Biodiversity documentation for Kerala – Flowering plants, part 6, 419.2004;Saldanha, Fl. Karnataka 2:132.1996.

Top of the Page