ಫಿಲಿಸಿಯಮ್ ಡೆಸಿಪಿಯೆನ್ಸ್ (Wt. & Arn.) Thw. - ಸ್ಯಾಪಿಂಡೇಸಿ

:

Vernacular names : Tamil: ವಲ್ಮುರಿಚ್ಚ,ನಿರೋಲಿ,ಸನಿಮರಂ,ಕಾಟ್ಟುನೆಲ್ಲಿMalayalam: ಕಾಡು ಹೂವರಸಿ,ನೀರೋಳಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗಿನ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಅನಿಯತವಾಗಿ ಚಕ್ಕೆಯೆದ್ದ ಮಾದರಿಯಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು,ಕೋನಯುಕ್ತ, ರೋಮರಹಿತವಾಗಿದ್ದು ಉದುರಿದ ಎಲೆಗಳ ಗುರುತುಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಹಾಗೂ ಸಮಗರಿ ಅಥವಾ ಅಸಮಗರಿ ರೂಪಿ ಮಾದರಿಯದಾಗಿದ್ದು 15 ರಿಂದ 20 ಸೆಂ.ಮೀ. ಉದ್ದವಿದ್ದು,ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ಪ್ರಮುಖವಾದ ರೆಕ್ಕೆಗಳನ್ನು ಹೊಂದಿರುತ್ತವೆ;ಉಪಪತ್ರಗಳು ತೊಟ್ಟುರಹಿತವಾಗಿದ್ದು 8 ರಿಂದ 12(-17)ರ ಸಂಖ್ಯೆ ಹೊಂದಿರುತ್ತವೆ, ಸಾಮಾನ್ಯವಾಗಿ ಅಭಿಮುಖಿಗಳಾಗಿ ಅಥವಾ ಉಪಅಭಿಮುಖಿಗಳಾಗಿರುತ್ತವೆ,ಕೆಲವು ವೇಳೆ ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ, 4-13 X 1.5 – 2.5 ಸೆಂ.ಮೀ. ಗಾತ್ರ ಹೊಂದಿದ್ದು, ರೇಖಾತ್ಮಕ-ಚತುರಸ್ರದ ಆಕಾರ, ಅಗಲವಾದ ಮತ್ತು ದುಂಡನೆಯ ಅಗ್ರದಲ್ಲಿ ತಗ್ಗುಳ್ಳ ಚೂಪಲ್ಲದ ಅಥವಾ ಅಪರೂಪವಾಗಿ ಕ್ರಮೇಣ ಚೂಪಾಗುವ ತುದಿ, ಅಸಮ್ಮಿತಿಯಾದ ಅಥವಾ ಬೆಣೆಯಾಕಾರದ ಬುಡ,ನಯವಾದ ಅಂಚು,ತೆಳುತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತ -ವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಸಂಖ್ಯವಾಗಿದ್ದು,ತೆಳುವಾಗಿರುತ್ತವೆ, ಬಹುಮಟ್ಟಿಗೆ ಕಡಿಮೆ ಅಂತರ ಹೊಂದಿದ್ದು , ಸಮಾಂತರ ಹೊಂದಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಸಣ್ಣ ಗಾತ್ರದಲ್ಲಿದ್ದು ಸಂಕೀರ್ಣಲಿಂಗಿಗಳಾಗಿರುತ್ತವೆ; ತೊಟ್ಟು 0.3 ಸೆಂ.ಮೀ. ಉದ್ದ ಹೊಂದಿರುತ್ತದೆ.
ಕಾಯಿ / ಬೀಜ : ಡ್ರೂಪ್ಗಳು ಕೆನ್ನೀಲಿ ಬಣ್ಣ ಹೊಂದಿದ್ದು,ಹೊಳಪನ್ನು ಹೊಂದಿರುತ್ತವೆ ಮತ್ತು ಅಗ್ರದಲ್ಲಿ ಸೂಕ್ಷ್ಮ ಮೊನಚು ಮುಳ್ಳಿನ ಸಮೇತವಿರುತ್ತವೆ, ಗಾತ್ರದಲ್ಲಿ1.3 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 1000 ಮೀ. ಎತ್ತರದ ಪ್ರದೇಶಗಳ ಒಣ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ದಕ್ಷಿಣ ಸಹ್ಯಾದ್ರಿಯ ಪೂರ್ವ ಇಳಿಜಾರು ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Jack. Enum. Syst. Pl. 19. 1790;Gamble, Fl. Madras 1: 249. 1997 (re. ed); Sasidharan, Biodiversity documentation for Kerala- Flowering Plants, part 6: 108. 2004.

Top of the Page