ಗಾರ್ಸೀನಿಯ ಗಮ್ಮಿ-ಗಟ್ಟ (L.) Robs. - ಕ್ಲೂಸಿಯೇಸಿ

Synonym : ಕ್ಯಾಂಬೋಜಿಯ ಗಮ್ಮಿ-ಗಟ್ಟ L.; ಗಾರ್ಸೀನಿಯ ಕ್ಯಾಂಬೋಜಿಯ (Gaertn.) Desr.

ಕನ್ನಡದ ಪ್ರಾದೇಶಿಕ ಹೆಸರು : ಮಂಡಹುಳಿ, ಮಂತುಳಿ, ಸೀಮೆ ಹುಣಿಸೆ, ಮಂತೆ ಹುಳಿ, ಉಪ್ಪಾಗಿ ಮರ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಹೊರ ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡುರಂಧ್ರ ಸಹಿತವಾಗಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಇಳಿಬಿದ್ದಿರುತ್ತವೆ; ಎಳೆಯದಾದ ಕಿರುಕೊಂಬೆಗಳು ಉಪದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹೇರಳವಾಗಿದ್ದು, ಹಳದಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆ,ಯಲ್ಲಿ-ರುತ್ತವೆ;ಎಲೆತೊಟ್ಟು 0.5 ರಿಂದ 1.6 ಸೆಂ.ಮೀ ಉದ್ದವಾಗಿದ್ದು, ಪೀನಮಧ್ಯ ಅಥವಾ ಆಳವಿಲ್ಲದ ಕಾಲುವೆ ಗೆರೆಗಳನ್ನು ಮೇಲ್ಭಾಗದಲ್ಲಿ ಹೊಂದ್ದಿದ್ದು ಒರೆಯುಳ್ಳ ಬುಡಭಾಗ ಹೊಂದಿರುತ್ತದೆ; ಎಲೆಪತ್ರಗಳು 5 -13 X 2 - 6 ಸೆಂ.ಮೀ ಗಾತ್ರ ಹೊಂದಿರುತ್ತವೆ; ಆಕಾರದಲ್ಲಿ ಬುಗುರಿ – ಭರ್ಜಿ ಸಮ್ಮಿಶ್ರಾಕಾರದಿಂದ ಬುಗುರಿಯಾಕಾರ-ದವರೆಗಿನ ವೈವಿಧ್ಯತೆಯನ್ನು ಹೊಂದಿರುತ್ತವೆ; ಸಾಮಾನ್ಯವಾಗಿ,ಎಲೆತುದಿ ಚೂಪಾಗಿದ್ದು ಕೆಲವು ವೇಳೆ ಚೂಪಲ್ಲದ ಮಾದರಿಯದಾಗಿರುತ್ತವೆ, ಎಲೆಯ ಬುಡ ಬೆಣೆಯಾಕಾರದಿಂದ ಹಿಡಿದು ಒಳಬಾಗಿದ ತಳವುಳ್ಳ ಮಾದರಿಯವರೆಗಿನ ರೀತಿಯದಾಗಿರುತ್ತದೆ, ಎಲೆಗಳು ತೊಗಲು ಅಥವಾ ಉಪ ತೊಗಲನ್ನೋಲುವ ಮಾದರಿಯವು; ಎರಡನೇ ದರ್ಜೆಯ ನಾಳಗಳು ಪತ್ರದ ಎರಡೂ ಬದಿಯಲ್ಲಿ ಪ್ರಮುಖವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣಲಿಂಗಿಗಳಾಗಿದ್ದು, ಅಕ್ಷಾಕಂಕುಳಿನಲ್ಲಿರುವ ಅಥವಾತುದಿಯಲ್ಲಿನ ಗುಚ್ಛಗಳಲ್ಲಿರುತ್ತವೆ; ಪುಷ್ಪಪತ್ರ ಕೆನೆ ಬಣ್ಣ ಹೊಂದಿದ್ದು ಪುಷ್ಪದಳಗಳು ನಸುಗೆಂಪಾಗಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಗೋಳಾಕಾರದಲ್ಲಿದ್ದು,8 ರಿಂದ 10 ತೋಡುಗುರುತುಗಳ ಸಮೇತವಿದ್ದು, 5 ಸೆಂ.ಮೀ ವ್ಯಾಸವನ್ನು ಹೊಂದಿದ್ದುಅನೇಕ ಬೀಜಗಳನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1800 ಮೀ . ಎತ್ತರದವರೆಗಿನ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಆಗಾಗ್ಗೆ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟಗಳ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳ ಅಡ್ಡಗಲಕ್ಕೂ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Brittonia 20: 103. 1968; Gamble,Fl.Madras1:73.1997(re.ed.); Sasidharan, Biodiversity documentation for Kerala-Flowering Plants, part 6:40.2004;Saldanha, Fl.Karnataka 1:205.1996;Cooke, Fl.Bombay 1: 77. 1902

Top of the Page