ಗಾರ್ಸೀನಿಯ ವೈಟಿಯೈ Anders. - ಕ್ಲೂಸಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ ಹಾಗೂ ಒರಟಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಿಕ್ಕ ಅಂತರಗಿಣ್ಣುಗಳನ್ನು ಹೊಂದಿದ್ದು 4 ಕೋನಗಳನ್ನು ಹೊಂದಿರುತ್ತವೆ ಹಾಗೂ ರೋಮರಹಿತ ವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹಳದಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು ರೋಮರಹಿತವಾಗಿದ್ದು 0.5 ರಿಂದ 0.8 ಸೆಂ.ಮೀ ಉದ್ದಹೊಂದಿದ್ದು,ಮಡಿಕೆಗಳನ್ನು ಹೊಂದಿದ್ದು, ಕಾಲುವೆಗೆರೆ ಸಮೇತವಾಗಿದ್ದು, ಕಾಡದವರೆವಿಗೆ ವಿಸ್ತರಿಸುತ್ತವೆ ಹಾಗೂ ಬುಡಭಾಗದಲ್ಲಿ ಒರೆಯನ್ನು ಹೊಂದಿರುತ್ತವೆ ಎಲೆಪತ್ರಗಳು 7.5 -14 X1 –3 ಸೆಂ.ಮೀ ಗಾತ್ರ ಹೊಂದಿದ್ದು, ರೇಖಾತ್ಮಕ ಭರ್ಜಿಯಾಕಾರದ ಅಥವಾ ಕೆಲವು ಸಂಧರ್ಭಗಳಲ್ಲಿ ಉಪ-ಕುಡುಗೋಲಿನಾಕಾರ ಹೊಂದಿದ್ದು, ಹಂತಹಂತವಾಗಿ ಕ್ರಮೇಣ ಚೂಪಾಗುವ ಮಾದರಿಯ ಎಲೆ ತುದಿ ಹಾಗೂ ಒಳಬಾಗಿದ ತಳವುಳ್ಳ ಮಾದರಿಯ ಬುಡವನ್ನು ಹೊಂದಿದ್ದು ಕಾಗದವನ್ನೋಲುವ ಮಾದರಿಯಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಸುಮಾರು 10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಸೂಕ್ಷ್ಮವಾದ ಜಾಲಬಂಧ ನಾಳವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹುಗಳು.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಗಂಡು ಹೂಗಳು ಅಕಷಾಕಂಕುಳಿನಳ್ಲಿರುವ ತೊಟ್ಟುರಹಿತ ಗುಚ್ಛಗಳಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಗೋಳಾಕಾರ ಅಥವಾ ಉಪಗೋಳಾಕಾರದಲ್ಲಿದ್ದು 2 ಸೆಂ.ಮೀ ಅಡ್ಡಳತೆ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಅಪರೂಪವಾಗಿ ಒಳಛಾವಣಿ ಮರಗಳಾಗಿ ಕಡಿಮೆ ಎತ್ತರದ ಪಪ್ರದೇಶಗಳ (700 ಮೀ) ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ದಕ್ಷಿಣ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ತಿತಿ (IUCN2000)

ಗ್ರಂಥ ಸೂಚಿ :

Hooker, Fl. Brit. Ind. 1: 265: 1874; Gamble, Fl. Madras 1: 74. 1997 (re. ed); Sasidharan, Biodiversity documentation for Kerala- Flowering Plants, part 6: 42. 2004.

Top of the Page