ಗಾರ್ಸೀನಿಯ ಜಾಂತೋಖೈಮುಸ್ J.Hk. ex Anders. - ಕ್ಲೂಸಿಯೇಸಿ

Synonym : ಗಾರ್ಸೀನಿಯ ಟಿಂಕ್ಟೋರಿಯ Dunn.;ಗಾರ್ಸೀನಿಯ ಜಾಂತೋಖೈಮುಸ್ J. Hk.; ಜಾಂತೋಖೈಮುಸ್ ಪಿಕ್ಟೋರಿಯಸ್ Roxb.; ಗಾರ್ಸೀನಿಯ ಪಿಕ್ಟೋರಿಯಸ್ (Roxb.) D’Arcy

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 14 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕ್ರಮಬಧ್ಧವಾಗಿರದ ಚಕ್ಕೆ ರೂಪದಲ್ಲಿನ ಮಾದರಿ -ಯಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು,ಹಳದಿ ಬಣ್ಣ ಹೊಂದಿದ್ದು ರೋಮರಹಿತ ವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹಳದಿ ಮಿಶ್ರಿತ ಶ್ವೇತ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ಹಾಗೂ ಜೋತಾಡುತಿರುತ್ತವೆ; ಎಲೆತೊಟ್ಟುಗಳು 1 ರಿಂದ 1.8 ಸೆಂ.ಮೀ. ಉದ್ದ ಹೊಂದಿದ್ದು, ಕೋನಯುಕ್ತವಾಗಿದ್ದು,ದೃಢವಾಗಿದ್ದು, ರೋಮರಹಿತವಾಗಿದ್ದು ಅಡ್ಡಡ್ಡವಾದ ಮಡಿಕೆಗಳನ್ನು ಹೊಂದಿದು, ರೋಮರಹಿತವಾಗಿರುತ್ತವೆ ಹಾಗೂ ಬುಡಭಾಗದಲ್ಲಿ ಒರೆಯನ್ನು ಹೊಂದಿರುತ್ತವೆ; ಎಲೆಪತ್ರಗಳು 10 -35 X 4 –12 ಸೆಂ.ಮೀ ಗಾತ್ರ,ರೇಖಾತ್ಮಕ ಚತುರಸ್ರದಿಂದ ಚತುರಸ್ರಾಕಾರದವರೆಗಿನ ಆಥವಾ ಕೆಲವು ವೇಳೆ ಭರ್ಜಿಯ ಆಕಾರವನ್ನೂ ಹೊಂದಿರುತ್ತವೆ, ಎಲೆಯ ತುದಿ ಚೂಪಾಗಿ ಅಥವಾ ಸ್ವಲ್ಪಮಟ್ಟಿಗೆ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ದುಂಡಾದ ಅಥವಾ ಸ್ವಲ್ಪಮಟ್ಟಿಗೆ ಒಳಬಾಗಿದ ತಳವುಳ್ಳ ಮಾದರಿಯದ್ದಾಗಿರುತ್ತದೆ, ಎಲೆಯ ಅಂಚು ಸ್ವಲ್ಪಮಟ್ಟಿಗೆ ಹಿಂಸುರುಳಿಯಾಗಿರುತ್ತದೆ, ಎಲೆಗಳು ದಪ್ಪನೆಯ ತೊಗಲ್ಲನ್ನೋಲುವ ಮಾದರಿಯಲ್ಲಿದ್ದು ಒಣಗಿದಾಗ ಹಳದಿ ಅಥವಾ ಕಂದು ಬಣ್ಣ ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತರ ಅಂಚಿನ ನಾಳಗಳೊಂದಿಗೆ ಸೇರಿಕೊಳ್ಳುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿ ಅಥವಾ ಅತಿವಯಸ್ಸಾದ ಕವಲುಗಳ ಮೇಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು 6.5 ಸೆಂ.ಮೀ ವಯಾಸ ಹೊಂದಿದ್ದು ಒಂದರಿಂದ ಎರಡು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1450 ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಕಂಡುಬರುವ ನಿತ್ಯಹರಿದ್ವರ್ಣ ಅಥವಾ ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಈ ಸಸ್ಯ ಬೆಳೆಯುತ್ತದೆ..

ಗ್ರಂಥ ಸೂಚಿ :

Hooker, Fl. Brit. India 1:269:1874;Ann. Missouri Bot. Gard. 67(4) : 998 (1980 publ. 1981);Gamble,Fl.Madras1:74.1997(re.ed.); Sasidharan, Biodiversity documentation for Kerala-Flowering Plants, part 6:42.2004; Cooke, Fl.Bombay 1: 78. 1902Saldanha, Fl. Karnataka 1:207.1996.

Top of the Page