ಗ್ಲೊಖಿಡಿಯಾನ್ ಎಲಿಪ್ಟಿಕಮ್ Wt. - ಯೂಫೊರ್ಬಿಯೇಸಿ

ಪರ್ಯಾಯ ನಾಮ : ಗ್ಲೊಖಿಡಿಯಾನ್ ಎಲಿಪ್ಟಿಕಮ್ Wt. var. ರಾಲ್ಫಿಯೈ (Hk.f.) Gamble; ಗ್ಲೊಖಿಡಿಯಾನ್ ಮಲಬಾರಿಕಮ್ Bedd.

Vernacular names : Tamil: ಕುಲನ್ಚನ್,ನ್ಜನ್ಜೆಟ್ಟಿMalayalam: ಬಾಣಾವರದ ಮರ, ಕಾಡು ಕಪ್ಪಿ,ನೀರಂಜಿನಿ,ನೀರ್ಚಳ್ಳೆ,ಸುಳ್ಳೆ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದ ಛಾಯೆಯಲ್ಲಿದ್ದು, ಬಲಿತಾಗ ಸೀಳಿಕಾ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ನಸುಗೆಂಪು ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು ಅಂದಾಜು 0.3 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ, ರೋಮರಹಿತವಾಗಿರುತ್ತವೆ;ಪತ್ರಗಳು 9 X 3 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ ಅಥವಾ ಅಂಡವೃತ್ತ- ಚತುರಸ್ರದ ಆಕಾರ ಹೊಂದಿದ್ದು, ಅಗ್ರದಲ್ಲಿ ಮೊನಚುಮುಳ್ಳನ್ನು ಹೊಂದಿದ ಕ್ರಮೇಣ ಚೂಪಾಗುವ ಮಾದರಿಯ ತುದಿ, ಅಸಮ್ಮಿತಿಯಾದ ಮತ್ತು ಒಳಬಾಗಿದ-ತಳಭಾಗಕ್ಕೆ ವಿಸ್ತರಿಸಿದ ಮಾದರಿಯ ಬುಡ, ನಯವಾದ ಅಂಚು ಹೊಂದಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ ಅಥವಾ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು, ಜಾಲಬಂಧ ನಾಳ ವಿನ್ಯಾಸ ಹೊಂದಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಗುಚ್ಛಗಳು;ಹೂಗಳು ಏಕಲಿಂಗಿಗಳಾಗಿದ್ದು ಹೆಣ್ಣು ಮತ್ತು ನಗಂಡು ಹೂಗಳು ಒಂದೇ ಸಸ್ಯದಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಅದುಮಿದಂತಿದ್ದು, 3 ರಿಂದ 6 ಹಾಲೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

200 ಮತ್ತು 1600 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Wight, Icon. Pl. Ind. Or. t. 1906. 1852; Chakrabarty and Ganopadhyay, JETB 19 199. 1995; Gamble, Fl. Madras 21308.1993; Sasidharan, Biodiversity documentation for Kerala- Flowering Plants, part 6 420. 2004; Saldanha, Fl. Karnataka 2 144.1996.

Top of the Page