ಗೋನಿಯೋತಲಾಮಸ್ ಕಾರ್ಡಿಯೋಪೆಟಾಲಸ್ (Dalz.) J. Hk. & Thoms. - ಅನೋನೇಸಿ

Synonym : ಪಾಲಿಯಾಲ್ತಿಯ ಕಾರ್ಡಿಯೋಪೆಟಾಲಾ Dalz.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 3 ರಿಂದ 5ಮೀ ಎತ್ತರದವರೆವಿಗೆ ಬೆಳೆಯುವ ಪೊದರು ಸಸ್ಯಗಳು ಅಥವಾ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ :
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ಎಲೆತೊಟ್ಟು 0.5 ರಿಂದ 1ಸೆಂ.ಮೀ. ಉದ್ದವಿದ್ದು, ಕಾಲುವೆಗೆರೆಯ ಸಹಿತವಿದ್ದು, ಎಳೆಯ ತೊಟ್ಟುಗಳು ಸೂಕ್ಷ್ಮವಾದ ಮೃದುತುಪ್ಪಳವನ್ನು ಹೊಂದಿರುತ್ತವೆ. ಎಲೆ ಪತ್ರ 10 - 23 × 3.5 - 7.5 ಸೆಂ.ಮೀ. ಉದ್ದವಿದ್ದು, ಅಂಡ-ವೃತ್ತಾಕೃತಿಯಿಂದ ಬುಗುರಿ ಭರ್ಜಿಯ ಆಕಾರದಲ್ಲಿರುತ್ತವೆ. ಕ್ರಮೇಣ ಚೂಪಾಗುವ ತುದಿಯಿದ್ದು, ಬುಡ ಚೂಪಾಗಿರುವುದರಿಂದ ಬೆಣೆಯಾಕಾರದಲ್ಲಿ ಇರುತ್ತದೆ. ಅಂಚು ಅಲೆಯಾಕಾರದಲ್ಲಿದ್ದು, ಮೇಲ್ಮೈ ರೋಮರಹಿತವಾಗಿರುತ್ತದೆ. ಎರಡನೇ ದರ್ಜೆಯ ನಾಳಗಳು 8 ರಿಂದ 12 ಜೋಡಗಳಿದ್ದು ತುದಿಯಲ್ಲಿ ಕುಣಿಕೆಗೊಂಡಿರುತ್ತವೆ, ಪತ್ರದ ಎರಡನೇ ದರ್ಜೆಯ ಅಂತರ ಭಾಗ ಮೇಲ್ಭಾಗದಲ್ಲಿ ಊದಿಕೊಂಡಿರುತ್ತವೆ, ತೃತೀಯ ದರ್ಜೆಯ ನಾಳಗಳು ವಿಶಾಲವಾದ ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿ ಒಂದೇ ಇರುತ್ತದೆ. ಅಥವಾ 1 ರಿಂದ 3 ಹೂಗಳು ಬಲಿತ ಕವಲುಗಳ ಮೇಲೆ ಗುಂಪಾಗಿರುತ್ತವೆ. ಪುಷ್ಪ ಪಾತ್ರೆಯ ಎಸಳುಗಳು ಕೆಂಪು ಮಿಶ್ರಿತ ಹಸಿರಾಗಿಯೂ, ಪುಷ್ಪದ ದಳಗಳು ತೆಳು ಹಸಿರಾಗಿಯೂ ಇರುತ್ತವೆ.
ಕಾಯಿ /ಬೀಜ : ಕಾಯಿಗಳು ಸಾಮೂಹಿಕವಾಗಿದ್ದು ಒಂದು ಬೀಜವುಳ್ಳ ಹಲವಾರು ಬೆರ್ರಿಗಳ ನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಕೆಳಛಾವಣಿಯ ಮರಗಳಾಗಿ (ನಾಲ್ಕನೇ ಸಮಗ್ರ ಸಮೂಹ) ಸಮುದ್ರ ಮಟ್ಟಕ್ಕಿಂತ 1100ಮೀ ಎತ್ತರದವರೆಗಿನ ಕಡಿಮೆ, ಮತ್ತು ಮಧ್ಯಮ ಎತ್ತರ ಪ್ರದೇಶದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುವ ಈ ಪ್ರಭೇದ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೀಮಿತ.

ಗ್ರಂಥ ಸೂಚಿ :

Hooker and Thomson, Fl. Ind. 107. 1855; Keshava Murthy and Yoganarasimhan, Fl. Coorg (Kodagu) 31. 1990; Gamble, Fl. Madras 1: 19.1997 (re.ed); Cook, Fl. Bombay 1:13. 1902; Sasidharan, Biodiversity documentation for Kerala- Flowering Plants, part 6: 17. 2004;Saldanha, Fl. Karnataka 1: 43. 1996.

Top of the Page