ಗೋನಿಯೋತಲಾಮಸ್ ವೈನಾಡೆನ್ಸಿಸ್ (Bedd.) Bedd. - ಅನೋನೇಸಿ

:

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 3 ರಿಂದ 5 ಮೀ ಎತ್ತರ ಬೆಳೆಯುವ ಪೊದೆಗಳು ಅಥವಾ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಎಳೆಯದಾಗಿದ್ದಾಗ ಸೂಕ್ಷ್ಮವಾದ ಮೃದುತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ತೊಟ್ಟುಗಳು 0.6 ರಿಂದ 1 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಹಿತವಾಗಿದ್ದು ರೋಮರಹಿತವಾಗಿರುತ್ತವೆ; ತೊಟ್ಟಗಳು ಕಾಲವೆಗೆರೆ ಸಮೇತವಿದ್ದು 1.0 ರಿಂದ 1.3 ಸೆಂ.ಮೀ. ಉದ್ದವಿರುತ್ತವೆ. ಎಲೆ ಪತ್ರಗಳು 10 - 24(-35) × 3 - 6 ಸೆಂ.ಮೀ. ಧೀರ್ಘ ಚತುರಸ್ರಾಕಾರದಿಂದ ಧೀರ್ಘ ಚತುರಸ್ರಾಕಾರ – ಭರ್ಜಿಯ ಆಕಾರ ಹೊಂದಿರುತ್ತವೆ. ಎಲೆ ತುದಿ ದಿಢೀರನೆ ಕ್ರಮೇಣ ಚೂಪಾಗುತ್ತದೆ. ಎಲೆಬುಡ ಒಳಬಾಗಿದ ತಳವುಳ್ಳ ಮಾದರಿಯಲ್ಲಿರುತ್ತವೆ. ಎರಡನೇ ದರ್ಜೆಯ ನಾಳಗಳು 13 ರಿಂದ 16 ಜೋಡಿಗಳಿದ್ದು, ಧೃಢವಾಗಿದ್ದು ಪತ್ರದ ಅಂಚಿನ ಬಳಿ ಕುಣಿಕೆಗೊಳ್ಳುತ್ತವೆ. ಹಾಗೂ ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದ ರೀತಿಯಲ್ಲಿ ಇರುತ್ತವೆ. ತೃತೀಯ ದರ್ಜೆಯ ನಾಳಗಳು ಸ್ಥೂಲವಾದ ಜಾಲಬಂಧ ನಾಳವಿನ್ಯಾಸವನ್ನು ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಸುಮಾರು 1.5ಸೆಂ.ಮೀ. ಉದ್ದವಿದ್ದು ಹಳದಿ ಮಿಶ್ರತಿ ಹಸಿರು ಬಣ್ಣ ಹೊಂದಿರುತ್ತವೆ ಹಾಗೂ ಅಕ್ಷಾಕಂಕುಳಿನಲ್ಲಿ ಅಥವಾ ಬಲಿತ ಕವಲುಗಳ ಮೇಲಿನ ಗುಬುಟುಗಳ ಮೇಲೆ ಒಂಟಿಯಾಗಿರುತ್ತದೆ; ಹೂ ತೊಟ್ಟು ಸುಮಾರು 5ಮಿ.ಮೀ. ಉದ್ದವಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು 1.2 ರಿಂದ 1.5 ಸೆಂ.ಮೀ ಉದ್ದವಿದ್ದು, ಚಿಕ್ಕ ತೊಟ್ಟು ಹೊಂದಿದ್ದು ಅಂಡವೃತ್ತದಿಂದ ಚತುರಸ್ರಾಕಾರದ ಆಕಾರದಲ್ಲಿದ್ದು ತುದಿಯಲ್ಲಿ ಸೂಕ್ಷ್ಮ ಮೊನಚನ್ನು ಹೊಂದಿರುತ್ತವೆ; ಬೆರ್ರಿಗಳು ಒಂದು ಬೀಜವನ್ನೊಳಗೊಂಡಿದ್ದು ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ನಿತ್ಯಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ (ನಾಲ್ಕನೇ ಸಮಗ್ರ ಸಮೂಹದಲ್ಲಿ) ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈನಿಂದ ಕೂರ್ಗ್(ಕೊಡಗು) ಪ್ರದೇಶಗಳಲ್ಲಿ ಕಾಣಸಿಗುತ್ತವೆ.

ಸ್ಥಿತಿ :

ಕಡಿಮೆ ಪ್ರಮಾಣದ ಅಪಾಯ ಸಂಭವಭೀತಿಗೆ ಹತ್ತಿರವಾಗಿರುವ ಸ್ಥಿತಿ (IUCN, 2000)

ಗ್ರಂಥ ಸೂಚಿ :

Beddome, Icon. Pl. Ind. Or. 1: 13. 61. 1868-1874; Gamble, Fl. Madras 1: 19. 1997 (re. ed); Sasidharan, Biodiversity documentation for Kerala- Flowering Plants, part 6: 17. 2004.

Top of the Page